Breaking : ಕತ್ತು ಕೊಯ್ದು ಮಾಜಿ ಸೈನಿಕನ ಬರ್ಬರ ಹತ್ಯೆ
ಚಿಕ್ಕೋಡಿ : ಮಾಜಿ ಸೈನಿಕನನ್ನು ಮಾರಕಾಸ್ತ್ರಗಳಿಂದ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ
ಚಿಕ್ಕೋಡಿ ಪಟ್ಟಣದ ವಿದ್ಯಾನಗರದಲ್ಲಿ ಶನಿವಾರ ಸಂಜೆ ನಡೆದಿದೆ.
ಚಿಕ್ಕೋಡಿ ತಾಲೂಕಿನ ಜೈನಾಪುರ ಗ್ರಾಮದ ಮಾಜಿ ಸೈನಿಕ ಹಾಗೂ ಗುತ್ತಿಗೆದಾರ ಈರಗೌಡ ಶಿವಪುತ್ರ ಟೋಪ್ಪಗೋಳ(45) ಎಂಬಾತನನ್ನು ಮಾರಕಾಸ್ತ್ರಗಳಿಂದ ಕತ್ತು ಕೊಯ್ದು ಕೊಲೆ ಮಾಡಲಾಗಿದೆ.
ಮೃತ ಈರಗೌಡನ ಹೆಂಡತಿ ಸಹೋದರ ಸಂಜಯ ಭಾಕರೆ ಎಂಬಾತ ಕೊಲೆ ಮಾಡಿರುವ ಆರೋಪಿ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಘಟನೆಗೆ ಕೌಟುಂಬಿಕ ಕಲಹ ಕಾರಣ ಎಂದು ಅಂದಾಜಿಸಲಾಗಿದ್ದು. ಕುಟುಂಬದವರ ಆಕ್ರದನ ಮುಗಿಲು ಮುಟ್ಟಿದೆ.
ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದ್ದು, ಘಟನಾ ಸ್ಥಳಕ್ಕೆ ಸಿಪಿಐ ವಿಶ್ವನಾಥ ಚೌಗಲಾ ಹಾಗೂ ಪಿಎಸ್ ಐ ಬಸನಗೌಡ ನೇರ್ಲಿ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.


