ಮಕ್ಕಳ ಕಾಟಕ್ಕೆ ಕೃಷ್ಣಾ ನದಿಗೆ ಹಾರಲು ಯತ್ನಿಸಿದ ಅಜ್ಜ ; ರಕ್ಷಿಸಿದ ಜನ…!
ಚಿಕ್ಕೋಡಿ : ಮಗ ಹಾಗೂ ಸೊಸೆಯ ಕಾಟಕ್ಕೆ ವೃದ್ಧನೋರ್ವ ನದಿಗೆ ಹಾರಲು ಯತ್ನಿಸಿದ್ದು ಕೂಡಲೇ ಸಾರ್ವಜನಿಕರು ರಕ್ಷಿಸಿದ ಘಟನೆ ತಾಲೂಕಿನ ಮಾಂಜರಿ ಸೇತುವೆ ಮೇಲೆ ನಡೆದಿದೆ.
ಸೋಮವಾರ ಸಂಜೆ ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿಗೆ ಇರುವ ಮಾಂಜರಿ ಸೇತುವೆ ಬಳಿ ಕೃಷ್ಣಪ್ಪ ಗೋಪಾಲಪ್ಪ ಹತ್ತಿಮರದ (77) ನದಿಗೆ ಹಾರಲು ಯತ್ನಿಸಿದ್ದಾನೆ. ಈ ವೇಳೆ ಓಡಿಬಂದ ಸಾರ್ವಜನಿಕರು ವೃದ್ಧನನ್ನು ಅಸಮಾಧಾಪಡಿಸಿದ್ದು ಆತ ಮನೆಯವರ ಕಾಟಕ್ಕೆ ಆತ್ಮಹತ್ಯೆಗೆ ಯತ್ಮಿಸಿರುವುದಾಗಿ ತಿಳಿಸಿದ್ದಾನೆ.
ಮೂಲತಃ ಯಮಕನಮರಡಿ ಗ್ರಾಮದ ಕೃಷ್ಣಪ್ಪ ಅವರಿಗೆ ಮಗ ಹಾಗೂ ಸೊಸೆ ವಿಪರೀತ ಕಿರುಕುಳ ನೀಡಿದ್ದಾರೆ. ಇನ್ನೂ ಇವರಿಗೆ ಹೆಣ್ಣುಮಗಳಿದ್ದು ಆಕೆಯೂ ತಂದೆಗೆ ಮನೆಗೆ ಬರದಂತೆ ಹೇಳಿದ್ದಾರೆ. ಇವೆಲ್ಲದರಿಂದ ಮನನೊಂದ ವೃದ್ಧ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ವೃದ್ಧನನ್ನು ರಕ್ಷಿಸಿದ ಸ್ಥಳೀಯರು ಅಂಕಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವೃದ್ಧನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಂಕಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


