Select Page

ಗ್ರಾಹಕರಿಗೆ ಸ್ವೀಟ್ ಕಟ್ಟಿ ಕೊಡುವಾಗ ಹೃದಯಾಘಾತ ; ಬೇಕರಿ ನೌಕರ ಸಾವು – Video ನೋಡಿ

ಗ್ರಾಹಕರಿಗೆ ಸ್ವೀಟ್ ಕಟ್ಟಿ ಕೊಡುವಾಗ ಹೃದಯಾಘಾತ ; ಬೇಕರಿ ನೌಕರ ಸಾವು – Video ನೋಡಿ

ಚಾಮರಾಜನಗರ : ಗ್ರಾಹಕರಿಗೆ ಸ್ವೀಟ್ ಪಾರ್ಸಲ್ ಮಾಡಿ ಕೊಡುವಾಗಲೇ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಚಾಮರಾಜನಗರದ ಬೇಕರಿಯೊಂದರಲ್ಲಿ ನಡೆದಿದೆ.

ವೇಣುಗೋಪಾಲ್ (56) ಮೃತರು. ಚಾಮರಾಜನಗರದ ಕೇಕ್ ವರ್ಲ್ಡ್ ಬೇಕರಿಯಲ್ಲಿ ಕೇರಳದ ವೇಣುಗೋಪಾಲ್ ಕಳೆದ 5 ವರ್ಷಗಳಿಂದ ಕೆಲಸ ಮಾಡುತ್ತಿದ್ದರು.

ಫೆಬ್ರವರಿ 12ರ ಸಂಜೆ 7.30ರ ಸುಮಾರಿಗೆ ಗ್ರಾಹಕರಿಗೆ ಸ್ವೀಟ್ ಪಾರ್ಸಲ್ ಮಾಡಿ ಕೊಡುವಾಗ ವೇಣುಗೋಪಾಲ್ ಏಕಾಏಕಿ ಕುಸಿದು ಬಿದ್ದರು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದ್ಯರು ಪರಿಶೀಲನೆ ನಡೆಸಿ, ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!