ನಕಲಿ RSS ನಾಯಕರನ್ನು ಸೃಷ್ಟಿಸಿ, ಬಿಜೆಪಿ ಟಿಕೆಟ್ ಕೊಡಿಸುವುದಾಗಿ 5 ಕೋಟಿ ವಂಚನೆ
ಬೆಂಗಳೂರು : 2023 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಅವರಿಂದ ಕೋಟ್ಯಾಂತರ ಹಣ ಪಡೆದಿದ್ದ ಆರೋಪದ ಮೇಲೆ ಹಿಂದೂಪರ ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಮ್ಮ ಪ್ರಖರ ಮಾತಿನಿಂದ ಜನರನ್ನು ಸೆಳೆಯುತ್ತಿದ್ದ ಚೈತ್ರಾ ಕುಂದಾಪುರ ಅವರನ್ನು ವಚನೆ ಆರೋಪದ ಮೇಲೆ ಬಂಧನ ಮಾಡಲಾಗಿದೆ. ಉದ್ಯಮಿ ನೀಡಿದ್ದ ಪ್ರಕರಣದ ಮೇಲೆ ಆರೋಪಿಗಳು ಕೆಲ ದಿನಗಳಿಂದ ತಲೆಮರೆಸಿಕೊಂಡಿದ್ದರು. ಸಧ್ಯ ಪೊಲೀಸ್ ಬಲೆಗೆ ಕೆಡವುವಲ್ಲಿ ಯಶಸ್ವಿಯಾಗಿದೆ.
ಬೈಂದೂರು ಬಿಜೆಪಿ ಟಿಕೆಟ್ Bjp ಆಕಾಂಕ್ಷಿಯಿಂದ ಸುಮಾರು ಐದು ಕೋಟಿ ಹಣ ಪಡೆದಿದ್ದ ಪ್ರಕರಣಕ್ಕೆ ಸಂಭಂಧಿಸಿದಂತೆ ಉದ್ಯಮಿ ಗೋವಿಂದ ಪೂಜಾರಿ ಎಂಬುವವರು ಸುಮಾರು 8 ಜನರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಬೆಂಗಳೂರಿನ ಸಿಸಿಬಿ ಪೊಲೀಸ್ ತಂಡ ತಡರಾತ್ರಿ ಉಡುಪಿ ಕೃಷ್ಣ ಮಠದ ಬೀದಿಯಲ್ಲಿದ್ದ ಚೈತ್ರಾ ಕುಂದಾಪುರ ಳನ್ನು ವಶಕ್ಕೆ ಪಡೆದಿದ್ದಾರೆ.
ಏಳು ಜನ ಆರೋಪಿತರು ಹಿಂದೂ ಸಂಘಟನೆ ಹಾಗೂ ಆರ್ ಎಸ್ ಎಸ್ ಹೆಸರಿನಲ್ಲಿ ಮೋಸ ಮಾಡಿದ್ದಾರೆ. ಪ್ರಮುಖ ಆರೋಪಿಗಳಾದ ಚೈತ್ರಾ ಕುಂದಾಪುರ Chaitra kundapura ಹಾಗೂ ಶ್ರೀಕಾಂತ್ ನಾಯಕ್ ಸಧ್ಯ ಪೊಲೀಸ್ ಅತಿಥಿಯಾಗಿದ್ದು, ಈಗಾಗಲೇ ಗಗನ್ ಕಡೂರು ಹಾಗೂ ಪ್ರಸಾದ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.
ಈ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಹಾಗೂ ತಂಡ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಕೇಂದ್ರದ ನಾಯಕರು ಹಾಗೂ ಆರ್ ಎಸ್ ಎಸ್ ಮುಖಂಡರ ಹೆಸರಿನಲ್ಲಿ ಮೋಸ RSS ಮಾಡಿದ್ದಾರೆ. ಅಷ್ಟೇ ಅಲ್ಲದೆ ನಕಲಿ ಆರ್ ಎಸ್ ಎಸ್ ನಾಯಕರ ತಂಡವನ್ನು ಸೃಷ್ಟಿ ಮಾಡಿದ್ದು ಮೋಸ ಮಾಡಿದ್ದಾರೆ.


