Select Page

Advertisement

ಜೈಲಿನಲ್ಲಿ  ಚೈತ್ರಾ ಕಣ್ಣೀರು ; ಕೈದಿ ಸಂಖ್ಯೆ – 9737

ಜೈಲಿನಲ್ಲಿ  ಚೈತ್ರಾ ಕಣ್ಣೀರು ; ಕೈದಿ ಸಂಖ್ಯೆ – 9737

ಬೆಂಗಳೂರು : ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಐದು ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಚೈತ್ರಾ ಕುಂದಾಪುರ ಗೆ ಸಧ್ಯ ಪರಪ್ಪನ ಅಗ್ರಹಾರ ಊಟವೇ ಗತಿಯಾಗಿದೆ.

ಜೈಲಿನಲ್ಲಿ ಕಣ್ಣೀರು ಹಾಕುತ್ತಿರುವ ಚೈತ್ರಾ ತಪ್ಪಿನ ಅರಿವು ಆದಂತೆ ಕಾಣುತ್ತದೆ. ಇನ್ನೂ ಈಕೆಯ ಸಹಚರರು ಮೌನಕ್ಕ ಶರಣಾಗುವ ಮೂಲಕ ಪ್ರಕರಣದಿಂದ ಬಹಳಷ್ಟು ನೊಂದಿದ್ದಾರೆ. ಚೈನ್ ಚೈತ್ರಾಗೆ ಕೈದಿ ಸಂಖ್ಯೆ – 9737 ಕೊಡಲಾಗಿದೆ.

ಶನಿವಾರ ಸಂಜೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ಚೈತ್ರಾ ಹಾಗೂ ಗ್ಯಾಂಗ್ ಸದಸ್ಯರಿಗೆ ಹೊಸ ಬಂದಿಖಾನೆಯ ಯಲ್ಲಿ ಎಲ್ಲರನ್ನೂ ಇಡಲಾಗಿದೆ. ಇನ್ನೂ ಚೈತ್ರಾ ಕುಂದಾಪುರ ಜೈಲೂಟ ಮಾಡಿದ್ದು ಕಣ್ಣೀರು ಹಾಕುತ್ತಿದ್ದಾಳೆ.

ಬಿಡುಗಡೆ ಭಾಗ್ಯ ಸಿಗದೆ ಜೈಲಿನಲ್ಲಿ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಚೈತ್ರಾ ಹಾಗೂ ತಂಡಕ್ಕೆ ದಿನ ಕಳೆದಂತೆ ಸಂಕಷ್ಟ ಹೆಚ್ಚಾಗುತ್ತಿದೆ. ಈಗಾಗಲೇ ಎಸ್ಐಟಿ ತನಿಖೆ ಜಾರಿಯಲ್ಲಿದ್ದು ಪ್ರಕರಣದ ಆಳ ಅರಿಯಲು ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!