Select Page

Advertisement

ಬಿಜೆಪಿ ಶಾಸಕರ ಅಮಾನತು ಆದೇಶ ಹಿಂಪಡೆದ ಸ್ಪೀಕರ್..!

ಬಿಜೆಪಿ ಶಾಸಕರ ಅಮಾನತು ಆದೇಶ ಹಿಂಪಡೆದ ಸ್ಪೀಕರ್..!

ಬೆಂಗಳೂರು : ಕಳೆದ ವಿಧಾನಸಭಾ ಅಧಿವೇಶನ ಸಂದರ್ಭದಲ್ಲಿ ಹನಿಟ್ರ್ಯಾಪ್ ವಿಚಾರವಾಗಿ ನಡೆದ ಚರ್ಚೆಯಲ್ಲಿ ಸ್ಪೀಕರ್ ಪೀಠದತ್ತ ತೆರಳಿ‌ ಗಲಾಟೆ ಮಾಡಿದ್ದ ಬಿಜೆಪಿ ‌ಶಾಸಕರ ಅಮಾನತು ಆದೇಶವನ್ನು ಸ್ಪೀಕರ್ ಹಿಂಪಡೆದಿದ್ದಾರೆ.

ಸ್ಪೀಕರ್ ಯು.ಟಿ ಖಾದರ್ ಅವರ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ 18 ಬಿಜೆಪಿ ಶಾಸಕರ ಅಮಾನತು ಆದೇಶವನ್ನು ಹಿಂಡೆಯುವ ನಿರ್ಧಾರ ಮಾಡಲಾಗಿದೆ. ಎರಡು ತಿಂಗಳ ನಂತರ ಅಮಾನತು ಹಿಂಪಡೆಯಲಾಗಿದ್ದು ಶಾಸಕರು ನಿರಾಳರಾಗಿದ್ದಾರೆ.

ಮಾರ್ಚ್ 21 ರಂದು ನಡೆದ ಕಲಾಪದಲ್ಲಿ ಗದ್ದಲ ಏರ್ಪಟ್ಟಿತ್ತು.‌ ಈ ಸಂದರ್ಭದಲ್ಲಿ ಡಾ. ಅಶ್ವಥ್ ನಾರಾಯಣ, ಶರಣು ಸಲಗಾರ, ಡಾ. ಅವಿನಾಶ್ ಜಾದವ್, ಡಾ. ಭರತ್ ಶೆಟ್ಟಿ, ದೊಡ್ಡನಗೌಡ ಪಟೀಲ್, ಬೈರತಿ ಬಸವರಾಜ, ಮುನಿರತ್ನ, ಶೈಲೇಂದ್ರ ಬೆಲ್ದಾಳೆ, ಬಿ.ಪಿ ಹರೀಶ್, ದೀರಜ್ ಮುನಿರಾಜು, ಚಂದ್ರು ಲಮಾಣಿ, ಉಮಾನಾಥ್ ಕೋಟ್ಯಾನ್, ಸಿ.ಕೆ ರಾಮಮೂರ್ತಿ, ಯಶ್ಪಾಲ್ ಸುವರ್ಣ, ಬಿ. ಸುರೇಶಗೌಡ, ಚನ್ನಬಸಪ್ಪ, ಎಸ್, ಆರ್ ವಿಶ್ವನಾಥ, ಎಂ.ಆರ್ ಪಾಟೀಲ ಅಮಾನತು ಹೊಂದಿದ್ದರು.

Advertisement

Leave a reply

Your email address will not be published. Required fields are marked *

error: Content is protected !!