ಗ್ರಾ.ಪಂ ಲೆಕ್ಕ ಸಹಾಯಕ ನೌಕರರ ಸಮಸ್ಯೆ ಪರಿಹರಿಸಲು ಪ್ರಯತ್ನ : ಮಹಾಂತೇಶ ಖೋತ್
ದಾವಣಗೆರೆ : ಕಳೆದ 12 ವರ್ಷಗಳಿಂದ ಗ್ರಾಮ ಪಂಚಾಯತ ಲೆಕ್ಕ ಸಹಾಯಕರು ಕರ್ತವ್ಯ ನಿರ್ವಹಿಸುತ್ತಿದ್ದರೂ ಇವರಿಗೆ ಸರಕಾರದಿಂದ ಬಡ್ತಿ ಭಾಗ್ಯ ಲಭ್ಯವಾಗಿಲ್ಲ. ಈ ಕುರಿತು ಗ್ರಾಮೀಣಾಭಿವೃದ್ಧಿ ಸಚಿವರ ಗಮನಕ್ಕೆ ತರಲಾಗಿದೆ ಎಂದು
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ಲೆಕ್ಕ ಸಹಾಯಕ ನೌಕರರ ಸಂಘದ ರಾಜ್ಯಾಧ್ಯಾಕ್ಷ ಮಹಾಂತೇಶ ಖೋತ್ ಅಭಿಪ್ರಾಯಪಟ್ಟರು.

ದಾವಣಗೆರೆಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಗೆಯಲ್ಲಿ ಭಾಗವಹಿಸಿ ಮಾತನಾಡಿದರು. ಲೆಕ್ಕ ಸಹಾಯಕ ನೌಕರರಿಗೆ ತಮ್ಮದೇ ಜಿಲ್ಲಾ ವ್ಯಾಪ್ತಿಯಲ್ಲಿ ಕೆಲಸ ಮಾಡಲು ಅವಕಾಶ ನೀಡುವುದು. ಲೆಕ್ಕಪತ್ರ ನಿರ್ವಹಣೆಗೆ ಖಜಾನೆ 2 ಇನ್ನೀತರ ತಂತ್ರಾಂಶಗಳಲ್ಲಿ ಲಾಗಿನ್ ವ್ಯವಸ್ಥೆ ಸೇರಿದಂತೆ ನೌಕರರರ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಲಾಗಿದೆ ಎಂದರು.
ಈ ವೇಳೆ ಜಿಲ್ಲಾಧ್ಯಕ್ಷರಾದ ಬೀರಪ್ಪ, ಉಪಾಧ್ಯಕ್ಷ್ಯರಾದ ಕಲ್ಪನಾ ಖಜಾಂಚಿ ಗಣೇಶ್ ಕಾರ್ಯದರ್ಶಿ ಸಂಪತ್ ಕುಮಾರ್ ಎಲ್ಲಾ ತಾಲೂಕಿನ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ನೌಕರರು ಪಾಲ್ಗೊಂಡಿದ್ದರು.

