ಬೆಳಗಾವಿ ಮೂರು ಜಿಲ್ಲೆಗಳಾಗಿ ವಿಭಜನೆ : ಸಾಹುಕಾರ್ ಮಹತ್ವದ ಘೋಷಣೆ
ಬೆಳಗಾವಿ : ಆಡಳಿತಾತ್ಮಕ ದೃಷ್ಟಿಯಿಂದ ಬೆಳಗಾವಿಯನ್ನು ಮೂರು ಜಿಲ್ಲೆಗಳಾಗಿ ವಿಭಜನೆ ಮಾಡಲಾಗುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಮಹತ್ವದ ಹೇಳಿಕೆ ನೀಡಿದ್ದಾರೆ.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 77 ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ಇವರು ಮಾತನಾಡಿದರು. ಅತ್ಯಂತ ದೊಡ್ಡ ಜಿಲ್ಲೆಯಾದ ಬೆಳಗಾವಿ ವಿಭಜನೆಗೆ ಒತ್ತಡ ಇದ್ದು ಸಧ್ಯದಲ್ಲೇ ಮೂರು ಜಿಲ್ಕೆಯಾಗಿ ವಿಭಜನೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಸಧ್ಯ ಬೆಳಗಾವಿ ಜೊತೆಗೆ ಗೋಕಾಕ್ ಮತ್ತು ಚಿಕ್ಕೋಡಿ ಈ ಎರಡೂ ಹೊಸ ಜಿಲ್ಲೆಗಳನ್ನಾಗಿ ವಿಭಜನೆ ಮಾಡಲಾಗುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಈಗಾಗಲೇ ಅಥಣಿ ಮತ್ತು ಬೈಲಹೊಂಗಲ ಜಿಕ್ಕೆಯಾಗಬೇಕೆಂದು ಅನೇಕ ದಿನಗಳಿಂದ ನಿರಂತರ ಹೋರಾಟ ಮಾಡಲಾಗುತ್ತಿತ್ತು. ಸಧ್ಯ ಸಚಿವರ ವಿಭಜನೆ ಹೇಳಿಕೆಗೆ ಕೆಲವು ಪ್ರದೇಶದಿಂದ ವಿರೋಧ ಉಂಟಾಗುವ ಸಾಧ್ಯತೆ ಇದೆ.


