ಹೂ ಕಿತ್ತಿದ್ದಕ್ಕೆ ಮಹಿಳಿಯ ಮೂಗನ್ನೇ ಕತ್ತರಿಸಿದ ದುರುಳರು
ಬೆಳಗಾವಿ : ಅಂಗನವಾಡಿಯ ಮಕ್ಕಳು ಪಕ್ಕದ ಮನೆಯವರ ಆಚರಣದಲ್ಲಿದ್ದ ಹೂ ಕಿತ್ತ ಕಾರಣಕ್ಕೆ ಅಂಗನವಾಡಿ ಸಹಾಯಕಿಯ ಮೂಗು ಕತ್ತರಿಸಿದ ಅಮಾನವೀಯ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ಬಸುರ್ತೆ ಗ್ರಾಮದಲ್ಲಿ ಘಟನೆ ನಡೆದಿದ್ದು,
ಸುಗಂಧಾ ಮೋರೆ(50) ಸಾವು ಬದುಕಿನ ಮಧ್ಯೆ ನರಳಾಡುತ್ತಿರುವ ಮಹಿಳೆ. ಜ.1ರಂದು ಅಂಗನವಾಡಿ ಕೇಂದ್ರದ ಮುಂದೆ ಘಟನೆ ನಡೆದಿದ್ದು, ಕಲ್ಯಾಣಿ ಮೋರೆ ಎಂಬಾತನ ಮನೆಯ ಮುಂದಿನ ಹೂ ಕಿತ್ತ ಆರೋಪದಲ್ಲಿ ಮಹಿಳೆಯ ಮೂಗು ಕತ್ತರಿಸಿದ್ದಾರೆ.
ಮೂಗು ಕಟ್ ಆಗಿ ಶ್ವಾಸಕೋಶದಲ್ಲಿ ರಕ್ತ ಹೋಗಿ ಸಾವು ಬದುಕಿನ ಮಧ್ಯೆ ಮಹಿಳೆ ಹೋರಾಡುತ್ತಿದ್ದಾಳೆ. ಅಂಗನವಾಡಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆದರು ಈವರೆಗೂ ಆರೋಪಿಯನ್ನು ಪೊಲೀಸರು ಬಂಧಿಸಿಲ್ಲ.


