Select Page

Advertisement

ಬೆಳಗಾವಿ : ಈಜಲು ಹೋಗಿದ್ದ ಬಾಲಕರು ನೀರುಪಾಲು, ಕಣ್ಣೀರಲ್ಲಿ ಕುಟುಂಬ..!

ಬೆಳಗಾವಿ : ಈಜಲು ಹೋಗಿದ್ದ ಬಾಲಕರು ನೀರುಪಾಲು, ಕಣ್ಣೀರಲ್ಲಿ ಕುಟುಂಬ..!



ಹುಕ್ಕೇರಿ : ಶಾಲೆಗಳಿಗೆ ಬೇಸಿಗೆ ರಜೆಇದ್ದ ಹಿನ್ನೆಲೆಯಲ್ಲಿ ಹಿಡಕಲ್‌ ಜಲಾಶಯದ ಹಿನ್ನೀರಿಗೆ ಈಜಲು ತೆರಳಿದ್ದ ಐವರು ಬಾಲಕರಲ್ಲಿ ಇಬ್ಬರು ನೀರು ಪಾಲಾಗಿರುವ ಘಟನೆ ಹುಕ್ಕೇರಿ ತಾಲೂಕಿನ ಹಳೆಗುಡಗನಟ್ಟಿ ಬಳಿ ಸೋಮವಾರ ಮಧ್ಯಾಹ್ನ ನಡೆದಿದ್ದು ಮಕ್ಕಳನ್ನು ಕಳೆದುಕೊಂಡ ಪೋಷಕರಆಕ್ರಂದನ ಮುಗಿಲುಮುಟ್ಟಿದೆ.

ಈ ಘಟನೆಯಲ್ಲಿಕೃಷ್ಣಾ ವಿಠ್ಠಲ ಖಾನಾಪೂರೆ (14) ಹಾಗೂ ಪ್ರಜ್ವಲ ಗೋಕಾರ (14) ಈ ಇಬ್ಬರು ಮೃತಪಟ್ಟ ದುರ್ಧೈವಿಗಳಾಗಿದ್ದಾರೆ. ಇವರಿಬ್ಬರು ದಾದಾಬಾನಟ್ಟಿಯ ಆರ್.ಸಿ ಸೆಂಟರ್‌ ಗ್ರಾಮದವರಾಗಿದ್ದಾರೆ.

ಶಾಲೆಗಳಿಗೆ ಬೇಸಿಗೆಯ ರಜೆ ಬಿದ್ದ ಹಿನ್ನೆಲೆಯಲ್ಲಿ ಆರ್.ಸಿ ಸೆಂಟರ್‌ಗ್ರಾಮದಐವರು ಬಾಲಕರು ಹಳೇ ಗುಡನಟ್ಟಿ ಗ್ರಾಮದ ದೇವಸ್ಥಾನ ಬಳಿಯ ಹಿಡಕಲ್‌ ಜಲಾಶಯ ಹಿನ್ನೀರಿನಲ್ಲಿ ಈಜಲು ನದಿಗೆ ಇಳಿದಿದ್ದರು. ಈ ಐವರಲ್ಲಿ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದು, ಇಬ್ಬರು ಜಲ ಸಮಾಧಿಯಾಗಿದ್ದಾರೆ.


Advertisement

Leave a reply

Your email address will not be published. Required fields are marked *

error: Content is protected !!