ಬೆಳಗಾವಿಯಲ್ಲಿ ಪೊಲೀಸ್ ಅಧಿಕಾರಿ ಮಗನಿಂದ ಬಾಲಕಿ ಮೇಲೆ ಅತ್ಯಾಚಾರ ; ಸಾಮೂಹಿಕ ಅತ್ಯಾಚಾರ ಎಸಗಿದ ದುರುಳರು
ಬೆಳಗಾವಿ : ಬಾಲಕಿ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದ್ದು ಇದರಲ್ಲಿ ಓರ್ವ ಪೊಲೀಸ್ ಅಧಿಕಾರಿ ಮಗ ಶಾಮೀಲಾಗಿದ್ದು ತಿಳಿದುಬಂದಿದೆ.
ಬೆಳಗಾವಿ ನಗರ ಹೊರವಲಯದಲ್ಲಿರುವ ರೆಸಾಟ್೯ನಲ್ಲಿ ಮೂರು ಜನ ಅಪ್ತಾಪ್ತರಿಂದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಕಳೆದ ಏಪ್ರಿಲ್ 11 ರಂದು ನಡೆಸಿದ್ದು ಈಗ ಬೆಳಕಿಗೆ ಬಂದಿದೆ.
ರೆಸಾರ್ಟ್ ನಲ್ಲಿ ಅಕ್ರಮವಾಗಿ ಓರ್ವ ಮುಸ್ಲಿಂ ವ್ಯಕ್ತಿ ಹೆಸರಿನಲ್ಲಿ ಬುಕ್ ಮಾಡಿ ನಂತರ ಬಾಲಕಿಯನ್ನು ರೂಂ ಗೆ ಕರೆದೊಯ್ದು ಮೂವರಿಂದ ಅತ್ಯಾಚಾರ ಎಸಗಿದ್ದು ತಿಳಿದುಬಂದಿದೆ.
ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತ ಬಾಲಕರನ್ನು ಟಿಳಕವಾಡಿ ಪೊಲೀಸರು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ತಿಳಿಸಿದ್ದಾರೆ.


