Select Page

Advertisement

ಮಹಿಳೆ ಮೇಲೆ ಹಲ್ಲೆ ; 14 ಜನರ ವಿರುದ್ಧ ಪ್ರಕರಣ ದಾಖಲು

ಕಾಗವಾಡ : ತಾಲೂಕಿನ ಐನಾಪುರ ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ಮಹಿಳೆಯನ್ನು ವಿವಸ್ತ್ರಗೊಳಿಸಿ  ಹಲ್ಲೆ‌ ಮಾಡಿರುವ ಘಟನೆಗೆ ಸಂಬಂಧಿಸಿದಂತೆ 14 ಜನರ ಮೇಲೆ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

ಮಹಿಳೆಯ ಕುಟುಂಬಕ್ಕೆ ರಾಜ್ಯ ಸರ್ಕಾರ 1991ರಲ್ಲಿ ಮೂರು ಎಕರೆ ಜಮೀನು ಮಂಜೂರು ಮಾಡಿತ್ತು. ಸರ್ಕಾರ ನೀಡಿದ್ದ ಜಮೀನಿನಲ್ಲೇ ಬಡ ಕುಟುಂಬ ಬದುಕು ಸಾಗಿಸುತ್ತಿತ್ತು. ಆದರೆ ಗ್ರಾಮದ ಕೆಲವರು 20 ಗುಂಟೆ ಜಾಗ ಅತಿಕ್ರಮಣ ಮಾಡಿಕೊಂಡು ಮಹಿಳೆ ಕೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ ನಡೆಸಿ ವಿವಸ್ತ್ರಗೊಳಿಸಿದ್ದರು. ಸಧ್ಯ ಈ ಘಟನೆ ಹೊರಬೀಳುತ್ತಿದ್ದರೆ ಪೊಲೀಸರು 15 ಜನರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸುಭಾಷ್ ದಾನೋಲೆ, ಸುರೇಶ್ ದಾನೋಲೆ, ಭೀರಪ್ಪ ನಾಗನೂರು, ಮಾಯಪ್ಪ ಹಲ್ಯಾಳ, ಮುರಾರಿ ಹಾದಿಮನಿ, ನವಲು ಹಾದಿಮನಿ, ನಾಗವ್ವಾ ಹಾದಿಮನಿ, ಅಕ್ಕವ್ವಾ ಹಾದಿಮನಿ, ರತ್ನವ್ವಾ ಹಾದಿಮನಿ, ರುಕ್ಮವ್ವ ಹಾದಿಮನಿ, ಭಾಗವ್ವ ನಾಗನೂರು, ಕಾಮವ್ವ ಹಾಗೂ ಭೀಮಪ್ಪ ಸೇರಿ ಒಟ್ಟು ಹದಿನಾಲ್ಕು ಜನರ ಮೇಲೆ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!