ಸಚಿವೆ ಹೆಬ್ಬಾಳ್ಕರ್ ಕ್ಷೇತ್ರದ ಸತೀಶ್ ಕಾಲೋನಿಯಲ್ಲಿ ಜನ ನೀರಿಗಾಗಿ ಪರದಾಟ
ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸ್ವ ಕ್ಷೇತ್ರದಲ್ಲೇ ಜನ ನೀರಿಗಾಗಿ ಪರದಾಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯಲು ನೀರಿಲ್ಲದೆ ಜನ ಕೊಡಗಳನ್ನು ಹಿಡಿದು ಬೀದಿಗೆ ಬರುತ್ತಿದ್ದು ಬೇಸಿಗೆ ಕಾಲದ ಮುಂಬರುವ ದಿನಗಳ ಕರಾಳತೆ ಈಗಲೇ ಆವರಿಸಿದಂತಾಗಿದೆ.
ಬೆಳಗಾವಿ ನ್ಯೂ ವೈಭನಗರದ ಸತೀಶ ಕಾಲೋನಿ, ನಿವಾಸಿಗಳು ನೀರಿಗಾಗಿ ಪರದಾಡುತ್ತಿದ್ದಾರೆ. ಬೆಳಗಾವಿ ತಾಲೂಕಿನ ಬಿ.ಕೆ.ಕಂಗ್ರಾಳಿ ಪಂಚಾಯತ್ ವ್ಯಾಪ್ತಿಯಲ್ಲಿರುವ ಈ ಕಾಲೋನಿಗಳಲ್ಲಿ ಸಧ್ಯ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ.
ಅಷ್ಟೇ ಅಲ್ಲದೆ ಕಳೆದ 30 ವರ್ಷಗಳಿಂದಲೂ ಇಲ್ಲಿ ನೀರಿಲ್ಲ ಸಮಸ್ಯೆ ಜೊತೆ ಚರಂಡಿ ವ್ಯವಸ್ಥೆಯೂ ಇದೆ. ಶಾಲಾ, ಕಾಲೇಜಿಗೆ ಹೋಗುವ ಮಕ್ಕಳೂ ನೀರಿನ ಕೊಡಗಳನ್ನು ಹಿಡಿದು ಸುತ್ತಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಜನ ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೂಡಲೇ ಸಚಿವರು ಈ ಕುರಿತು ಕ್ರಮ ಕೈಗೊಳ್ಳಬೇಕು ಎಂಬುದು ಜನರ ಆಗ್ರಹವಾಗಿದೆ. ಜೊತೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವು ಇದೆ.


