Select Page

Advertisement

ಫೆ. 10 ರಂದು ದುರ್ಗಾದೇವಿ ಜಾತ್ರಾ ಮಹೋತ್ಸವ….!

ಫೆ. 10 ರಂದು ದುರ್ಗಾದೇವಿ ಜಾತ್ರಾ ಮಹೋತ್ಸವ….!



ಬೆಳಗಾವಿ : ಬೆಳಗಾವಿ ನಗರದ ಕಾಕತಿವೇಸ್ ಗಲ್ಲಿಯ ದುರ್ಗಾದೇವಿ ದೇವಸ್ಥಾನದ ಜಾತ್ರಾ‌ ಮಹೋತ್ಸವ ಬರುವ ಫೆ.10 ರ ಮಂಗಳವಾರ ಜರುಗಲಿದೆ ಎಂದು ಶಿವಶರಣ ಸಮಗಾರ ಹರಳಯ್ಯ ಸಮಾಜದ ಅಧ್ಯಕ್ಷ ಪರಶುರಾಮ್ ತೊರೆ ಮಾಹಿತಿ ನೀಡಿದರು.

ಶಿವಶರಣ ಸಮಗಾರ ಹರಳಯ್ಯ ಸಮಾಜ ಜಾಗೂ ಯುವಕ ಸಂಘದ ವತಿಯಿಂದ ಪ್ರತಿವರ್ಷ ಭರ್ಜರಿಯಾಗಿ ಆಚರಿಸಲಾಗುವ ಕಾಕತಿವೇಸ್ ದುರ್ಗಾ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸ ಫೆ. 10 ರಂದು ಜರುಗಲಿದ್ದು ಈ ದಿನ ವಿಶೇಷ ಪೂಕಾ ಕಾರ್ಯಗಳು ನಡೆಯಲಿವೆ.‌

ದೇವಿಯ ವಿಶೇಷ ಪೂಜೆ ಹಾಗೂ ಅಭಿಷೇಕದೊಂದಿಗೆ ಪ್ರಾರಂಭವಾಗಿ ಭಕ್ತರು ಭಕ್ತಿಯಿಂದ ಪೂರ್ಣಕುಂಭ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಬಂದು ಪಾರಂಪರಿಕವಾಗಿ ನಡೆದು ಬಂದ ಪದ್ಧತಿಯಂತೆ ದೇವಿಗೆ ಪಡ್ಡಲಿಗೆತುಂಬುವ ಕಾರ್ಯಕ್ರಮ ಜರಗುವುದು.

ಶ್ರೀ ದುರ್ಗಾದೇವಿಯ ಈ ವಿಶೇಷ ಧಾರ್ಮಿಕ ಕಾರ್ಯಕ್ರಮ 1970 ರಿಂದ ಈ ಸಮಾಜದ ಪಂಚರು ನಡೆಸಿಕೊಂಡು ಬಂದಿದ್ದಾರೆ .ಇದನ್ನು ಈಗಿನ ಯುವಕ ಮಂಡಳ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಪಂಚ ಕಮಿಟಿಯವರು ಕೂಡಿಕೊಂಡು ಭಕ್ತಿಯಿಂದ ನಡೆಸಿಕೊಂಡು ಬರುತ್ತಿದ್ದಾರೆ.

ಶಿವಶರಣ ಸಮಗಾರಹರಳಯ್ಯ ಸಮಾಜದ ಅಧ್ಯಕ್ಷ ಪರಶುರಾಮ್ ತೊರೆ ಉಪಾಧ್ಯಕ್ಷ ಕಿರಣ್ ಮುರಗೋಡ್ ಖಜಾಂಚಿ ಆನಂದ್ ತೋರೆ, ಕಾರ್ಯದರ್ಶಿನೀಲೇಶ್ ರಾಯಬಾಗಕರ್, ಸಚಿನ್ ಮಾನೆ. ಸದಸ್ಯರು ಹಾಗೂ ಪಂಚ ಕಮಿಟಿಯ ಲಕ್ಷ್ಮಣ್ ಕಾಳೆ, ಲಕ್ಷ್ಮಣ್ ಮಾಚಕನೂರ್, ರಾಜೇಂದ್ರ ಬೀಡಕರ್, ಅಶೋಕ್ ರಾಯ ರಾಯಬಾಗಕರ್, ಇವರ ಉಪಸ್ಥಿತಿಯಲ್ಲಿ ಜಾತ್ರೆ ಯು ವಿಜೃಂಭಣೆಯಿಂದ ಜರುಗಲಿದ್ದು, ಸಮಾಜದ ಎಲ್ಲ ಬಂಧುಗಳು ಉಪಸ್ಥಿತರಿದ್ದು ಜಗನ್ಮಾತೆಯ ಜಾತ್ರೆಯನ್ನು ಯಶಸ್ವಿ ಗೊಳಿಸಿಕೊಡಲು ವಿನಂತಿಸಲಾಗಿದೆ .

Advertisement

Leave a reply

Your email address will not be published. Required fields are marked *

error: Content is protected !!