Select Page

ಬೆಳಗಾವಿಯಲ್ಲಿ ಸ್ಕೋಲಿಯೋಸಿಸ್ ಹಾಗೂ ಬೆನ್ನುಮೂಳೆಯ ವಿರೂಪಗಳಿಗೆ ಉಚಿತ ಚಿಕಿತ್ಸಾ ಶಿಬಿರ

ಬೆಳಗಾವಿಯಲ್ಲಿ ಸ್ಕೋಲಿಯೋಸಿಸ್ ಹಾಗೂ ಬೆನ್ನುಮೂಳೆಯ ವಿರೂಪಗಳಿಗೆ ಉಚಿತ ಚಿಕಿತ್ಸಾ ಶಿಬಿರ



ಬೆಳಗಾವಿ : ಜಿಲ್ಲೆಯಲ್ಲಿ ಸ್ಕೋಲಿಯೋಸಿಸ್ ಹಾಗೂ ಬೆನ್ನುಮೂಳೆಯ ವಿವಿಧ ವಿರೂಪಗಳಿಂದ ಬಳಲುತ್ತಿರುವ ಮಕ್ಕಳಿಗಾಗಿ ಬೆಂಗಳೂರು ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯ ವತಿಯಿಂದ ಉಚಿತ ಚಿಕಿತ್ಸಾ ಸಹಾಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಬೆನ್ನುಮೂಳೆಯ ಶಸ್ತ್ರಚಿಕಿತ್ಸಕ ಡಿ. ರಾಘವೇಂದ್ರ ರಾವ್, ಬೆನ್ನುಮೂಳೆ ಮತ್ತು ಕೀಲು ಶಸ್ತ್ರಚಿಕಿತ್ಸಾ ವಿಭಾಗ, ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆ, ವಸಂತ ನಗರ, ಬೆಂಗಳೂರು–560052 ಇವರ ನೇತೃತ್ವದಲ್ಲಿ ಈವರೆಗೆ 250ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸಾ ಸಹಾಯ ನೀಡಲಾಗಿದೆ.

ಈ ರೋಗವು ವಿಶೇಷವಾಗಿ 2016ರಲ್ಲಿ ಬೆಳಗಾವಿ ಗೆ ಮೊದಲು ಈ ಕ್ಯಾಂಪ್ ಪ್ರಾರಂಭ ಮಾಡಿದ್ದೂ ಎಂದು ಡಾ. ರಾಘವೇಂದ್ರ ರಾವ್ ಅವರು ಮಾಹಿತಿ ನೀಡಿದರು. ಅನೇಕ ಮಕ್ಕಳಿಗೆ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಸರಿಯಾದ ಪರಿಹಾರ ದೊರಕದೇ ಇರುವ ಸಂದರ್ಭಗಳಲ್ಲಿ, ನಮ್ಮ ಆಸ್ಪತ್ರೆಯಲ್ಲಿ ಇಂತಹ ಮಕ್ಕಳನ್ನು ಗುರುತಿಸಿ ಸಂಪೂರ್ಣ ಉಚಿತ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.

ಬೆಳಗಾವಿಯಲ್ಲಿ ಈ ಉಚಿತ ಚಿಕಿತ್ಸಾ ಅಭಿಯಾನವನ್ನು ಎರಡನೇ ಬಾರಿ ನಡೆಸಲಾಗುತ್ತಿದ್ದು, ಇಲ್ಲಿ ಚಿಕಿತ್ಸೆ ಪಡೆದ ಮಕ್ಕಳು ಹಾಗೂ ಅವರ ಪಾಲಕರು ಸಂತಸ ವ್ಯಕ್ತಪಡಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಸ್ಕೋಲಿಯೋಸಿಸ್ ಮತ್ತು ಬೆನ್ನುಮೂಳೆಯ ವಿರೂಪಗಳು (SCOLIOSIS AND SPINAL DEFORMITIES) ಬಗ್ಗೆ ಜನರು ಗಾಬರಿಯಾಗದೆ, ಆರಂಭಿಕ ಹಂತದಲ್ಲೇ ತಜ್ಞ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಪಡೆಯಬೇಕು ಎಂದು ಡಾ. ರಾಘವೇಂದ್ರ ರಾವ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಮಾನವೀಯ ಸೇವಾ ಕಾರ್ಯವು ಬೆಳಗಾವಿ ಜಿಲ್ಲೆಯಲ್ಲಿ ಅನೇಕ ಮಕ್ಕಳ ಬದುಕಿಗೆ ಹೊಸ ಆಶಾಕಿರಣ ಮೂಡಿಸಿದೆ.
ಈ ಸಂದರ್ಭದಲ್ಲಿ ವೈದ್ಯರು ಬಾಲಕರು ಮಕ್ಕಳು ಹಾಗೂ ಪೋಷಕರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!