ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬ್ಲೂ ಆಗಿ ನಾಲ್ವರು ಆಯ್ಕೆ : ಪ್ರೋ ವಿಲಾಸ ಕಾಂಬಳೆ

ಬೆಳಗಾವಿ : ಜಿಲ್ಲೆಯ ಅಥಣಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಐದು ಜನ ವಿದ್ಯಾರ್ಥಿಗಳು ನಮ್ಮ ಮಹಾವಿದ್ಯಾಲಯಕ್ಕೆ ಹೆಮ್ಮೆಯ ಗರಿ ಮೂಡಿಸಿದ್ದು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಮಟ್ಟದ ಕ್ರೀಡಾಕೂಟದಲ್ಲಿ ಯೂನಿರ್ವಸಿಟಿ ಬ್ಲೂ ಆಗಿ ಹೊರಹೊಮ್ಮಿದ್ದು ಅಖಿಲ ಭಾರತ ಮಟ್ಟದಲ್ಲಿ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯ ಪ್ರತಿನಿಧಿಸಲಿದ್ದಾರೆ ಎಂದು ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಂಶುಪಾಲ ರಾದ ಪ್ರೋ ವಿಲಾಸ ಕಾಂಬಳೆ ಸಂತಸ ಹಂಚಿಕೊಂಡರು .
ಸರಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಮಾತನಾಡಿದ ಅವರು ನಮ್ಮ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಅಪಾರ ಶ್ರಮವಹಿಸಿ ಅತ್ಯುನ್ನತ ಸಾಧನೆಗೈದಿದ್ದು ನಮ್ಮ ಮಹಾವಿದ್ಯಾಲಯಕ್ಕೆ ಹೆಮ್ಮೆಯ ಗರಿ ಮೂಡಿಸಿದ್ದಾರೆ.
ಬಿ ಎ ಪ್ರಥಮ ವರ್ಷ ವ್ಯಾಸಂಗ ಮಾಡುತ್ತಿರುವ ಕುಮಾರ ದರ್ಶನ ವಿಠ್ಠಲ ಕುಂಬಾರ (57 ಕೆ ಜಿ ಕುಸ್ತಿ) ಯೂನಿವರ್ಸಿಟಿ ಬ್ಲೂ, ಬಿ ಬಿ ಎ ಪ್ರಥಮ ವರ್ಷ ವ್ಯಾಸಂಗ ಮಾಡುತ್ತಿರುವ ಕುಮಾರ ಮನೋಜ್ ಕಾಶೀನಾಥ ಜಾಧವ ಬಾಸ್ಕೆಟ್ ಬಾಲ್,ಬಿ ಎ 3ಸೇಮ್ ತರಗತಿಯ ಕುಮಾರ ಸದಾಶಿವ ಮಲ್ಲಪ್ಪ ಗುಮತಾಜ (ಕುಸ್ತಿ 55 ಕೆ ಜಿ )ಪ್ರಥಮ ಸ್ಥಾನ ಯೂನಿವರ್ಸಿಟಿ ಬ್ಲೂ, ಬಿ ಎ 5ನೆ ಸೆಮಿಸ್ಟರ್ ಕುಮಾರಿ ಪ್ರೀತಿ ಶ್ರೀಕಾಂತ ಆಜೂರ ವಾಲಿಬಾಲ್, (ಯೂನಿವರ್ಸಿಟಿ ಬ್ಲೂ) ಬಿ ಎ 1 ತರಗತಿಯ ಕುಮಾರ ಮುತ್ತಣ್ಣ ಶಂಕರ ಪಾಟೀಲ್ ( 57 ಕೆ ಜಿ ಕುಸ್ತಿ ) ಎರಡನೇ ಸ್ಥಾನ,
ಹೀಗೆ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ತೋರಿದ್ದಾರೆ.ದೇಶದ ಅಖಿಲ ಭಾರತ ಮಟ್ಟದ ವಿವಿಧ ವಿಶ್ವ ವಿದ್ಯಾಲಯಗಳ ಸ್ಪರ್ಧೆಯಲ್ಲಿ ಈ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.ಭಾರತ ಅಂತರ ವಿವಿ ಸ್ಪರ್ಧೆಯಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಪ್ರತಿನಿಧಿಸಲಿದ್ದಾರೆ.
ಈ ವೇಳೆ ಮಹಾವಿದ್ಯಾಲಯದ ಪ್ರೊ ವಿಲಾಸ ಕಾಂಬಳೆ,ಪ್ರೊ ಜಿನೇಂದ್ರ ಬಣಜವಾಡ,ಪ್ರೋ ಸಂತೋಷ ಉಂಡಾಡಿ, ದೈಹಿಕ ನಿರ್ದೇಶಕ ರಮೇಶ ಬೆಳಂಬಗಿ, ಡಾ ಸುರೇಶ ತಕತರಾವ, ಡಾ ಹರೀಶ್, ಪ್ರೋ ಪಿ ಎಲ್ ಪೂಜಾರಿ,ಡಾ. ಆರ್. ಎಸ್ ದೊಡ್ಡನಿಂಗಪ್ಪಗೋಳ, ಪ್ರೋ ರಾಜು ಭಜಂತ್ರಿ,ಡಾ. ಎಂ ಎ ಚನ್ನಾಪೂರ, ಡಾ. ಆರ್ ಎಸ್ ಅಂಬಿ,ಡಾ. ಡಾ.ಶಿಲ್ಪಾ ರಾಮನಗೋಳ,ಶ್ರೀಮತಿ ಅರ್ಚನಾ ಭಜಂತ್ರಿ, ಡಾ ಎಂ ಬಿ ಸಲಗರೆ, ಪ್ರೋ ಅಭಿನಂದನ ಸುಳಕೂಡೆ, ಸಚಿನ ಮೊರೆ ಹಾಗೂ ಶೈಕ್ಷಣಿಕ ಅಭಿವೃದ್ಧಿ ಮಂಡಳಿ ಸರ್ವಸದಸ್ಯರು ಹಾಗೂ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿವರ್ಗ ಅಭಿನಂದನೆ ಸಲ್ಲಿಸಿದ್ದಾರೆ.

