ಐತಿಹಾಸಿಕ ನಿರ್ಧಾರ ಕೈಗೊಂಡ RCU ವಿಶ್ವವಿದ್ಯಾಲಯ ; ಹೆಸರು ಕೆಡಿಸಲು ಹೊರಟವರಿಗೆ ತಕ್ಕ ಉತ್ತರ…!

ಬೆಳಗಾವಿ : ಅನವಶ್ಯಕ ಕಾರಣ ಹಿಡಿದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹೆಸರು ಹಾಳು ಮಾಡಲು ಹೊರಟವರಿಗೆ ಮುಖಭಂಗ ಆಗುವಂತಹ ಐತಿಹಾಸಿಕ ನಿರ್ಧಾರವನ್ನು ವಿಶ್ವವಿದ್ಯಾಲಯ ಸಿಂಡಿಕೇಟ್ ತಗೆದುಕೊಂಡಿದೆ.
ಹಲವು ವರ್ಷಗಳಿಂದ ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಜೀವನಾಡಿಯಾಗಿ ಕೆಲಸ ಮಾಡುತ್ತಿರುವ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಐತಿಹಾಸಿಕ ನಿರ್ಧಾರ ಪ್ರಕಟಿಸಿದೆ. ಲೈಂಗಿಕ ಆರೋಪ ಹೊರಸಿ ತನ್ನ ನಿರ್ಧಾರದಿಂದ ಹಿಂದೆ ಸರಿದರು ಯುವತಿಯ ಜೊತೆ ನಿಂತ ವಿಶ್ವವಿದ್ಯಾಲಯ ಆರೋಪ ಹೊತ್ತ ಪ್ರೊಫೆಸರ್ ಕೆಎಲ್ಎನ್ ಮೂರ್ತಿ ವಿರುದ್ಧ ಕ್ರಮ ಕೈಗೊಂಡಿದೆ.
ಪಿಎಚ್‌ಡಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ ಹೊತ್ತ ಮಾರ್ಗದರ್ಶಕ ಪ್ರೊ.ಕೆ.ಎಲ್.ಎನ್.ಮೂರ್ತಿ ಗೆ ಸೇವಾಯಿಂದ ಕಡ್ಡಾಯ ನಿವೃತ್ತಿ ನೀಡಲು ಹಾಗೂ ಸಂತ್ರಸ್ತೆ ವಿದ್ಯಾರ್ಥಿನಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಲು ಸಿಂಡಿಕೇಟ್ ಸಭೆ ನಿರ್ಣಯ ಕೈಗೊಂಡಿದೆ ಎಂದು ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ತಿಳಿಸಿದ್ದಾರೆ.
ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಯೇ ಪ್ರೊ.ಕೆ.ಎಲ್.ಎನ್.ಮೂರ್ತಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳಲ್ಲಿ ವಿವಿಯಲ್ಲಿ ಮರುಕಳಿಸಬಾರದು. ವಿದ್ಯಾರ್ಥಿಗಳ ರಕ್ಷಣೆ ಮಾಡುವುದು ವಿವಿ ಜವಾಬ್ದಾರಿಯಾಗಿದ್ದು, ಇಂತಹ ವಿಷಯದಲ್ಲಿ ತಪ್ಪಿತಸ್ಥರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ನಿರ್ಣಯ ಕೈಗೊಂಡಿದೆಮ
ಲೈಂಗಿಕ ದೂರು ವಾಪಸ್ ಪಡೆದುಕೊಂಡಿರುವ ವಿದ್ಯಾರ್ಥಿನಿ ವಿರುದ್ಧ ಕಾರಣ ಕೇಳಿ ನೀಡಿದ್ದ ನೋಟೀಸ್‌ಗೆ ಉತ್ತರ ನೀಡಲು ವಿಳಂಬವಾಗಿದ್ದರಿಂದ ಘಟಿಕೋತ್ಸವದಲ್ಲಿ ಪಿಎಚ್‌ಡಿ ಪದವಿ ಪ್ರದಾನ ಮಾಡಲು ಸಾಧ್ಯವಾಗಲಿಲ್ಲ. ವಿದ್ಯಾರ್ಥಿನಿಯನ್ನು ಅವಮಾನಿಸುವ ಯಾವುದೇ ಉದ್ದೇಶ ವಿವಿ ಇಟ್ಟುಕೊಂಡಿಲ್ಲ. ಪಿಎಚ್‌ಡಿ ಪದವಿಗೆ ಅರ್ಜಿ ಸಲ್ಲಿಸಿ, ಹಣ ಕಟ್ಟಿದ್ದರು ಏಕೆ ಪರಿಗಣಿಸಿಲ್ಲ ಎಂಬುದರ ಕುರಿತು ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ವಿಸಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಯುವತಿ ಪರವಾಗಿ ವಿಶ್ವವಿದ್ಯಾಲಯ ನಿಲ್ಲುವುದರ ಜೊತೆಗೆ ಮುಂದೆ ವಿಶ್ವವಿದ್ಯಾಲಯ ಹೆಸರು ಹಾಳು ಮಾಡುವ ಯಾವುದೇ ಪ್ರಕ್ರಿಯೆಗೆ ಅವಕಾಶ ನೀಡುವುದುದಿಲ್ಲ ಎಂಬ ನಿಲುವಿಗೆ ಬಂದಿದ್ದು ಸ್ವಾಗತಾರ್ಹವಾಗಿದೆ.

