ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿ ಬಿದ್ದ ಟ್ಯಾಂಕರ್…!
ಬೆಳಗಾವಿ : ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಟ್ಯಾಂಕರ್ ಉರುಳಿ ಬಿದ್ದ ಘಟನೆ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ಇಂಡಿಯನ್ ಆಯಿಲ್ ಸಂಸ್ಥೆಗೆ ಸೇರಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಹುಕ್ಕೇರಿ ತಾಲೂಕಿನ ಬೆನಕೋಳಿ ಗ್ರಾಮದ ಸಮೀಪದ ಘಟಪ್ರಭಾ ನದಿ ಸೇತುವೆ ಬಳಿ ಸಂಭವಿಸಿದೆ.
ಘಟನೆಯಲ್ಲಿ ಯಾವುದೇ ರೀತಿಯಲ್ಲಿ ಇಂಧನ ಸೋರಿಕೆಯಾಗಿಲ್ಲ. ಉರುಳಿ ಬಿದ್ದ ವಾಹನವನ್ನು ಎತ್ತಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.


