Select Page

ಲೈಂಗಿಕ ಕಿರುಕುಳ ಅಂದವಳು ನಂತರ ತಪ್ಪಿಲ್ಲ ಅಂದ್ಳು ; RCU ಹೆಸರು ಕೆಡಿಸಲು ಆತ್ಮಹತ್ಯೆ ನಾಟಕ..?

ಲೈಂಗಿಕ ಕಿರುಕುಳ ಅಂದವಳು ನಂತರ ತಪ್ಪಿಲ್ಲ ಅಂದ್ಳು ; RCU ಹೆಸರು ಕೆಡಿಸಲು ಆತ್ಮಹತ್ಯೆ ನಾಟಕ..?

ಬೆಳಗಾವಿ : ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೆಲ ನಾಟಕೀಯ ಬೆಳವಣಿಗೆಯಿಂದ ಗೊಂದಲದ ವಾತಾವರಣ ಮೂಡಿದೆ. ವಿದ್ಯಾರ್ಥಿನಿಯೊಬ್ಬಳು ತನಗೆ ಪಿಹೆಚ್‌ಡಿ ಪ್ರಮಾಣಪತ್ರ ನೀಡಿಲ್ಲ ಎಂದು ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ಸಾಕಷ್ಟು ಅನುಮಾನ ಹುಟ್ಟುಹಾಕಿದೆ.

ಇಂದು ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಈ ಹಿಂದೆ ತನಗೆ ಪಿಹೆಚ್‌ಡಿ ಗೈಡ್ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಗಂಭೀರ ಆರೋಪ ಮಾಡಿದ್ದಳು. ಇದಾದ ನಂತರ ಜುಲೈ ನಲ್ಲಿ 54ನೇ ವಿಶೇಷ ತುರ್ತು ಸಿಂಡಿಕೇಟ್ ಸಭೆ ಕರೆದು ವಿಜಯಪುರದ ಸ್ನಾತಕೋತ್ತರ ಪದವಿ ಕೇಂದ್ರದಲ್ಲಿ ಇತಿಹಾಸ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೊಫೆಸರ್ ಕೆಎಲ್ಎನ್ ಮೂರ್ತಿಯನ್ನು ಅಮಾನತು ಮಾಡಿತ್ತು.‌

Sexual harassment of women at workplace (prevention prohibition and redressal) act 2013 and UGC (prevention prohibition and redressal of sexual harassment etc) regulations 2015

ರ ಅಡಿಯಲ್ಲಿ ರಚಿಸಲಾಗಿರುವ ಆಂತರಿಕ ಸಮಿತಿ ವಿವರವಾಗಿ ತನಿಖೆಯನ್ನು ಮಾಡಿ ತನಿಖಾ ವರದಿಯನ್ನು ಸಲ್ಲಿಸಿದ್ದು, ವರದಿಯಲ್ಲಿ ಆರೋಪಗಳು ರುಜುವಾತು ಆಗಿರುವ ಬಗ್ಗೆ ಸ್ಪಷ್ಟ ವರದಿ ನೀಡಿದ ಹಿನ್ನೆಲೆಯಲ್ಲಿ ಆರೋಪಿತ ಪ್ರಾಧ್ಯಾಪಕರನ್ನು ಸೇವೆಯಿಂದ ಅಮಾನತ್ತು‌ ಗೊಳಿಸಿರುವುದನ್ನು ಸಭೆಯು ಒಕ್ಕೊರಲಿನಿಂದ ಸ್ವಾಗತಿಸಿ, ಅನುಸಮರ್ಥನೆ ನೀಡಿತು. 

ಇದಾದ ನಂತರ ಇದೇ ಯುವತಿ ತನಗೆ ಯಾವುದೇ ಲೈಂಗಿಕ ಕಿರುಕುಳ ನೀಡಿಲ್ಲ. ಮಾನಸಿಕ ಸ್ಥಿತಿ ಕಳೆದುಕೊಂಡು ನಾನು ಆರೋಪ ಮಾಡಿದ್ದೇ ಎಂದು ಯುವತಿ ಹೇಳಿಕೊಂಡಿದ್ದಳು. ಈಗ ಅದೇ ಯುವತಿ ತನಗೆ ಪಿಹೆಚ್‌ಡಿ ಪ್ರಮಾಣಪತ್ರ ನೀಡಲು ಬೇಕೆಂದೇ ವಿಳಂಬ ಮಾಡುತ್ತಿದ್ದಾರೆ ಎಂಬ ಆರೋಪ ಮಾಡುವ ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಈ ಎಲ್ಲಾ ಘಟನೆ ನೋಡುತ್ತಿದ್ದರೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಆಡಳಿತ ಮಂಡಳಿ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆಯಾ ಎಂಬ ಆರೋಪ ಕೇಳಿಬರುತ್ತಿದೆ. ಈ ಕುರಿತು ಸರಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ಕೈಗೊಂಡರೆ ಶಿಕ್ಷಣ ಕೇಂದ್ರಕ್ಕೆ ಒಳಿತು.


Advertisement

Leave a reply

Your email address will not be published. Required fields are marked *

error: Content is protected !!