Select Page

Advertisement

ಡಿಕೆಶಿ ಸಿಎಂ ಆಗಲಿ ; ಕೌಜಲಗಿ ಮಂತ್ರಿಯಾಗಲಿ : ಪೂಜೆ ಸಲ್ಲಿಸಿದ ಅಭಿಮಾನಿಗಳು

ಡಿಕೆಶಿ ಸಿಎಂ ಆಗಲಿ ; ಕೌಜಲಗಿ ಮಂತ್ರಿಯಾಗಲಿ : ಪೂಜೆ ಸಲ್ಲಿಸಿದ ಅಭಿಮಾನಿಗಳು

ಬೈಲಹೊಂಗಲ : ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿ – ಶಾಸಕ ಕೌಜಲಗಿಗೆ ಸಚಿವ ಸ್ಥಾನ ಸಿಗಲಿ ಎಂದು ಯುವ ಕಾಂಗ್ರೆಸ್ ವಿಶೇಷ ಪೂಜೆ ಸಲ್ಲಿಸಿದೆ.

ರಾಜ್ಯದಲ್ಲಿ ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ನಿರೀಕ್ಷೆಯ ನಡುವೆ, ಬೈಲಹೊಂಗಲ ಯುವ ಕಾಂಗ್ರೆಸ್ ತಾಲೂಕು ಘಟಕದಿಂದ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮಹತ್ವದ ರಾಜಕೀಯ ಸಂದೇಶ ನೀಡಲಾಗಿದೆ.

ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸಮಿ ಮಕಾನದಾರ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಭಾನುವಾರ ಸಂಜೆ ಪಟ್ಟಣದ ಶ್ರೀ ಮರಡಿ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕೆಂಬ ಹಾಗೂ ಶಾಸಕ ಮಹಾಂತೇಶ ಕೌಜಲಗಿಗೆ ಸಚಿವ ಸ್ಥಾನ ಸಿಗಬೇಕೆಂಬ ಆಶಯ ವ್ಯಕ್ತಪಡಿಸಿದರು.

ಈ ಸಂದರ್ಭ 101 ಈಡುಗಾಯಿ ಒಡೆದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ವೇಳೆ ಮುರಗೋಡ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ದಾದಾಪೀರ ಜಮಾದಾರ, ರಾಜೇಸಾಬ ಜಮಾದಾರ, ಆಸಿಫ್ ಅತ್ತಾರ, ಆಶ್ಫಾಕ್ ಪಡೇಸೂರ, ಬಾಬು ಸುತಗಟ್ಟಿ, ಸಾಕೀಬ್ ಸಂಗೊಳ್ಳಿ, ಅಯಾಜ್ ತಾಳಿಕೋಟಿ, ಆದಮ್ ನದಾಫ್ ಸೇರಿದಂತೆ ಅನೇಕ ಪ್ರಮುಖರು ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.


Advertisement

Leave a reply

Your email address will not be published. Required fields are marked *

error: Content is protected !!