ಬೆಳಗಾವಿಯಲ್ಲಿ ಸಚಿವ ಶಿವಾನಂದ ಪಾಟೀಲ ಮಹತ್ವದ ಸಭೆ ; ರೈತರಿಗೆ ಸಿಗುತ್ತಾ ಗುಡ್ ನ್ಯೂಸ್…?
ಬೆಳಗಾವಿ : ಕಬ್ಬು ಬೆಳೆಗಾರರು ಸರಕಾರಕ್ಕೆ ನೀಡುರುವ ಗಡುವು ಮುಗಿಯುವ ಸಮಯ ಸಮೀಪಿಸುತ್ತಿದ್ದಂತೆ ಇತ್ತ ಸಕ್ಕರೆ ಸಚಿವರು ಬೆಳಗಾವಿಗೆ ದೌಡಾಯಿಸಿದ್ದಾರೆ.
ಬೆಳಗಾವಿ ನಗರದ ಖಾಸಗಿ ಹೊಟೇಲ್ ನಲ್ಲಿ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದಾರೆ. ಕಬ್ಬಿಗೆ 3,500 ರೂ. ಬೆಲೆ ನೀಡುವ ಕುರಿತು ಈ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳುತ್ತಾರಾ ಎಂಬ ಕುತೂಹಲ ರೈತರಲ್ಲಿದೆ.
ಸರಕಾರ ಇವತ್ತು ನಿರ್ಧಾರ ಕೈಗೊಳ್ಳದಿದ್ದರೆ ಪ್ರತಿಭಟನಾ ನಿರತ ರೈತರು ನಾಳೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ. ಸಧ್ಯ ಇಕ್ಕಟ್ಟಿಗೆ ಸಿಲುಕಿರುವ ಸರಕಾರ ಯಾವ ನಿರ್ಧಾರ ತಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕು.


