video : ರೈತರ ಆಕ್ರೋಶಕ್ಕೆ ಕಂಗಾಲಾದ ಸಚಿವರು : ಹೆಚ್.ಕೆ ಪಾಟೀಲ್ ಕಾರಿಗೆ ಮುತ್ತಿಗೆ
ಗುರ್ಲಾಪುರ : ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ನಡೆಯುತ್ತಿರು ರೈತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ವಾಪಸ್ಸಾಗುವ ವೇಳೆ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಕಾರು ತಡೆದು ರೈತರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಗುರ್ಲಾಪುರದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಸಚಿವ ಹೆಚ್.ಕೆ ಪಾಟೀಲ್ ಮುಖ್ಯಮಂತ್ರಿಗಳ ಜೊತೆ ರೈತ ಮುಖಂಡರ ಸಭೆ ನಡೆಸಿ ಶುಕ್ರವಾರ ನ್ಯಾಯ ಒದಗಿಸುವ ಪ್ರಯತ್ನ ಮಾಡುವುದಾಗಿ ಹೇಳಿದರು.
ಸಚಿವರ ಮಾತಿಗೆ ಸ್ಪಂದನೆ ನೀಡದ ರೈತರು ತಮ್ಮ ಹೋರಾಟ ಮುಂದುವರಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಇನ್ನೂ ಸಂಧಾನ ಯಶಸ್ವಿಯಾಗದೆ ಸಚಿವರು ವಾಪಸ್ ತೆರಳುವ ವೇಳೆ ಅವರ ಕಾರಿಗೆ ಮುತ್ತಿಗೆ ಹಾಕಿದ ರೈತರು ಆಕ್ರೋಶ ಹೊರಹಾಕಿದರು.

