
ಕುಂದಾನಗರಿಯಲ್ಲಿ ರಾಜ್ಯೋತ್ಸವ ಕಲರವ ; ಮಧ್ಯರಾತ್ರಿ ಕುಣಿದು ಕುಪ್ಪಳಿಸಿದ ಯುವ ಸಮೂಹ

ಬೆಳಗಾವಿ : ರಾಜ್ಯದಲ್ಲಿಯೇ ಅತ್ಯಂತ ವಿಜೃಂಭಣೆಯಿಂದ ಆಚರಿಸುವ ಬೆಳಗಾವಿ ಕನ್ನಡ ರಾಜ್ಯೋತ್ಸವ ರಂಗೇರಿದೆ. ಮಧ್ಯರಾತ್ರಿಯಿಂದಲೇ ನಗರದ ಚನ್ನಮ್ಮ ವೃತ್ತದಲ್ಲಿ ಕನ್ನಡ ಮನಸ್ಸುಗಳು ಜೊತೆಗೂಡಿದ್ದವು.
ಅ. 31 ರ ಶುಕ್ರವಾರ ರಾತ್ರಿ ಚನ್ನಮ್ಮ ವೃತ್ತಕ್ಕೆ ಆಗಮಿಸಿದ್ದ ಯುವ ಸಮೂಹ ಪಟಾಕಿ ಸಿಡಿಸಿ ಕನ್ನಡ ಬಾವುಟ ಹಾರಿಸಿ ಸಂಭ್ರಮಿಸಿದರು. ಇನ್ನೂ ಅನೇಕರು ಭುವನೇಶ್ವರಿ ದೇವಿಗೆ ಪುಷ್ಪ ಸಮರ್ಪಿಸಿದರು.
ಅದ್ಧೂರಿ ರಾಜ್ಯೋತ್ಸವ ಆಚರಣೆಗೆ ಜಿಲ್ಲಾಡಳಿತ ಸರ್ವ ಸಿದ್ಧತೆ ಮಾಡಿಕೊಂಡಿದೆ. ಜೊತೆಗೆ ನಗರ ಪೊಲೀಸ್ ಆಯುಕ್ತರು ಬಿಗಿ ಬಂದೋಬಸ್ತ್ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಯಶಸ್ವಿಯಾಗಿ ರಾಜ್ಯೋತ್ಸವ ಆಚರಿಸಲು ವೇದಿಕೆ ಸಿದ್ಧಗೊಂಡಿದೆ.