
ಬೆಳಗಾವಿ : ಗೋ ಮಾಂಸ ಸಾಗಾಟ ; ಲಾರಿಗೆ ಬೆಂಕಿ ಹಚ್ಚಿದ ಯುವಕರು

ಬೆಳಗಾವಿ : ಅಕ್ರಮವಾಗಿ ಗೋ ಮಾಂಸ ಸಾಗಾಟ ಮಾಡುತ್ತಿದ್ದ ಲಾರಿ ತಡೆದು ಬೆಂಕಿ ಹಚ್ಚಿರುವ ಪ್ರಕರಣ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ನಡೆದಿದೆ.
ಕುಡಚಿ ಪಟ್ಟಣದಿಂದ ಹೈದರಾಬಾದ್ ಗೆ ತೆರಳುತ್ತಿದ್ದ ಲಾರಿಯಲ್ಲಿ 5 ಟನ್ ನಷ್ಟು ಗೋಮಾಂಸ ಸಾಗಿಸುತ್ತಿರುವುದು ತಿಳಿದ ಹಿಂದೂ ಕಾರ್ಯಕರ್ತರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ.
ಸುಮಾರು ನಾಲ್ಕು ಲಾರಿಗಳ ಪೈಕಿ ಒಂದನ್ನು ತಡೆದು ವಿಚಾರಿಸಿದ ಸಂದರ್ಭದಲ್ಲಿ ಗೋಮಾಂಸ ರಪ್ತು ಮಾಡುತ್ತಿರುವುದು ತಿಳಿದುಬಂದಿದೆ. ರೊಚ್ಚಿಗೆದ್ದ ಯುವಕರು ಕಾರಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಅಥಣಿ ವಲಯ ಡಿವೈಎಸ್ಪಿ ಹಾಗೂ ಕಾಗವಾಡ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಲಾರಿಯಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಹೊತ್ತಿ ಉರಿಯುತ್ತಿದ್ದ ಲಾರಿ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿಗಳು ನಂದಿಸಿದ್ದು, ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.