ಎಮಿನೆಂಟ್ ಕೋಚಿಂಗ್ ಕ್ಲಾಸಿಸ್ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ ಕಲರವ
ಬೆಳಗಾವಿ : ಒಂದು ದೇಶ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಭದ್ರತೆ ದೃಷ್ಟಿಯಿಂದ ಬಲಿಷ್ಠವಾಗಿರಬೇಕಾದರೆ ಆ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರ ಪಾತ್ರ ಬಹಳಷ್ಟು ಮುಖ್ಯ. ಬಲಿಷ್ಠ ರಾಷ್ಟ್ರವಾಗಿರುವ ಭಾರತ ಉತ್ತಮ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಹಿರಿಯ ಉಪನ್ಯಾಸಕ ನಾಗರಾಜ ಕಾಳೆ ಅಭಿಪ್ರಾಯಪಟ್ಟರು.
ಬೆಳಗಾವಿಯ ಎಮಿನೆಂಟ್ ಕೋಚಿಂಗ್ ಕ್ಲಾಸಿಸ್ ನಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಎಮಿನೆಂಟ್ ಕೋಚಿಂಗ್ ಕ್ಲಾಸಿಸ್ ಸಂಸ್ಥೆ ಶಿಸ್ತಿನ ಜೊತೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಇದೇ ರೀತಿಯಲ್ಲಿ ತನ್ನ ಪರಿಪೂರ್ಣ ಕರ್ತವ್ಯ ಮುಂದುವರಿಸಿಕೊಂಡು ಸಾಗಲಿ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಲ್ಲಿಕಾರ್ಜುನ ಕರ್ಜಗಿಮಠ ಮಾತನಾಡಿ. ಎಲ್ಲಾ ಮಕ್ಕಳ ಭಾವನೆ ಅರಿತು ಪಾಠ ಮಾಡಬೇಕಾದದ್ದು ಗುರುವಿನ ಕಾಯಕ. ಸಕಾರಾತ್ಮಕವಾಗಿ ಶಿಕ್ಷಣ ನೀಡುವ ಕಲೆಯನ್ನು ಶಿಕ್ಷಕರು ಅಳವಡಿಸಿಕೊಳ್ಳಬೇಕು ಎಂದರು. ವಿಕಾಸ ಸಂಸ್ಥೆ ಚೇರಮನ್ ಮಂಜುನಾಥ ಕೌಲಗಿ ಮಾತನಾಡಿ. ಒಬ್ಬ ರೋಗಿ ತಪ್ಪು ಮಾಡಿದರು ಒಬ್ಬ ರೋಗಿ ಸಾಯಬಹುದು. ಇಂಜಿನಿಯರ್ ತಪ್ಪು ಮಾಡಿದರೆ ಒಂದು ಕಟ್ಟಡ ಉರುಳಬಹುದು ಆದರೆ ಒಬ್ಬ ಶಿಕ್ಷಕ ತಪ್ಪು ಮಾಡಿದರೆ ಇಡೀ ವ್ಯವಸ್ಥೆ ಹಾಳಾಗುತ್ತದೆ ಎಂದರು.
ಈ ವೇಳೆ 2024 – 25 ನೇ ಸಾಲಿನ ಆರ್.ಎಮ್.ಎಸ್, ಸೈನಿಕ ಶಾಲೆ ಹಾಗೂ ನವೋದಯ ಶಾಲೆ ಪ್ರವೇಶ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದು ಸ್ಥಾನ ಪಡೆಯುವಲ್ಲಿ ಮಕ್ಕಳನ್ನು ತಯಾರು ಮಾಡಿದ್ದ ಎಲ್ಲಾ ಶಿಕ್ಷಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸೋಮಶೇಖರ್ ಸೂಲಿಗಾವಿ, ಗುರುಸಿದ್ದಪ್ಪ ಕೌಲಗಿ, ಚನ್ನಬಸಪ್ಪ ಪಡಗಾನೂರ, ಭಾಗ್ಯಲಕ್ಷ್ಮೀ ಕೌಲಗಿ, ಸದಾನಂದ ಬಡ್ಡೂರ ಉಪಸ್ಥಿತರಿದ್ದರು. ನಾಗವೇಣಿ ಸಾಬನ್ನವರ ಪ್ರಾರ್ಥನೆ ಹಾಡಿದರು. ವಾಣಿಶ್ರೀ ದೇವೂರ ಸ್ವಾಗತಿಸಿದರು. ಅಕ್ಷತಾ ಮಹಾಜನ್, ಅಂಜಲ್ನಾ ಶಹಾಪುರಿ ನಿರೂಪಿಸಿದರು. ಸ್ಪೂರ್ತಿ ದೇವಲಾಪುರ ವಂದಿಸಿದರು.





