ಬೆಳಗಾವಿಯಲ್ಲಿ ವಂದೇ ಭಾರತ ರೈಲಿಗೆ ಅದ್ದೂರಿ ಸ್ವಾಗತ ; ವೇಳಾಪಟ್ಟಿ ಮಾಹಿತಿ ಇಲ್ಲಿದೆ…!
ಬೆಂಗಳೂರು : ಬೆಳಗಾವಿ – ಬೆಂಗಳೂರು ನೂತನ ವಂದೇ ಭಾರತ ರೈಲು ಸಂಚಾರ ಪ್ರಾರಂಭವಾಗಿದ್ದು ಭಾನುವಾರ ರಾತ್ರಿ ಬೆಳಗಾವಿಗೆ ವಂದೇ ಭಾರತ ರೈಲಿಗೆ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು.
ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಂದೇ ಭಾರತ ರೈಲಿಗೆ ಭಾನುವಾರ ಮಧ್ಯಾಹ್ನ ಚಾಲನೆ ನೀಡಿದರು. ಬೆಳಗಾವಿಯಲ್ಲಿ ಸಂಸದ ಜಗದೀಶ್ ಶೆಟ್ಟರ್, ಈರಣ್ಣ ಕಡಾಡಿ ಸ್ವಾಗತ ಮಾಡಿಕೊಂಡರು.
ಬೆಂಗಳೂರು – ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಸಂಚಾರವು ಆಗಸ್ಟ್ 11, 2025 ರಿಂದ ಆರಂಭವಾಗಲಿದೆ. ಬೆಳಗಾವಿಯಿಂದ ಹೊರಡುವ ರೈಲು ಸಂಖ್ಯೆ 26751 ಬೆಳಿಗ್ಗೆ 5:20 ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 1:50 ಕ್ಕೆ ಕೆಎಸ್‌ಆರ್ ಬೆಂಗಳೂರು ತಲುಪಲಿದೆ.
ಈ ಮಾರ್ಗದಲ್ಲಿ ಧಾರವಾಡ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಎಸ್‌ಎಂಎಂ ಹಾವೇರಿ, ದಾವಣಗೆರೆ, ತುಮಕೂರು ಮತ್ತು ಯಶವಂತಪುರ ನಿಲ್ದಾಣಗಳಲ್ಲಿ ರೈಲು ನಿಲ್ಲಲಿದೆ.
ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 26752 ಮಧ್ಯಾಹ್ನ 2:20 ಕ್ಕೆ ಹೊರಟು ರಾತ್ರಿ 10:40 ಕ್ಕೆ ಬೆಳಗಾವಿಗೆ ತಲುಪಲಿದೆ. ಈ ರೈಲು ಕೂಡಾ ಇದೇ ನಿಲ್ದಾಣಗಳಲ್ಲಿ ನಿಲ್ಲಲಿದೆ (ಗುರುವಾರ ಹೊರತುಪಡಿಸಿ ವಾರದ ಆರು ದಿನಗಳು).


