Select Page

Advertisement

ಕೃಷ್ಣಾ ನದಿ ನೀರಿನ ಮಟ್ಟ ಏರಿಕೆ ; ಕುಡಚಿ ಸೇತುವೆ ಜಲಾವೃತ

ಕೃಷ್ಣಾ ನದಿ ನೀರಿನ ಮಟ್ಟ ಏರಿಕೆ ; ಕುಡಚಿ ಸೇತುವೆ ಜಲಾವೃತ

ಬೆಳಗಾವಿ : ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಚಿಕ್ಕೋಡಿ ಉಪ‌ ವಿಭಾಗದ ಕೃಷ್ಣಾ, ದೂದಗಂಗಾ ನದಿಗಳು ಅಪಾಯದ ಮಟ್ಟ ಮೀರಿ‌ ಹರಿಯುತ್ತಿವೆ.

ಸಧ್ಯ ಕೃಷ್ಣಾ ನದಿಗೆ 1 ಲಕ್ಷ ಕ್ಯೂಸೆಕ್ ನಷ್ಟು ನೀರಿನ ಒಳಹರಿವು ಇದ್ದು ಮಹಾರಾಷ್ಟ್ರಕ್ಕೆ ಸಂಪರ್ಕಿಸುವ ಕುಡಚಿ – ಉಗಾರ ಸೇತುವೆ ಜಲಾವೃತಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬ್ಯಾರಿಕೆಡ್ ಹಾಕಿ ಜನ ಹೋಗದಂತೆ ಕಟ್ಟೆಚ್ಚರ ವಹಿಸಿದ್ದಾರೆ.

ಕೃಷ್ಣಾ ನದಿಗೆ ಅಡ್ಡಲಾಗಿರುವ ಯಡೂರು – ಕಲ್ಲೋಳ, ಭಾವನಸೌಂದತ್ತಿ – ಮಾಂಜರಿ, ದೂದಗಂಗಾ ನದಿಯ ಮಲ್ಲಿಕವಾಡ – ದತ್ತವಾಡ, ಕಾರದಗಾ – ಭೋಜ, ಭೋಜವಾಡಿ – ಕಾರದಗಾ, ಎಕ್ಸಂಬಾ – ದತ್ತವಾಡ, ಭಾರವಾಡ – ಕುನ್ನೂರು, ಬೋಜವಾಡಿ – ಕುನ್ನೂರು ಸೇತುವೆ ಜಲಾವೃತಗೊಂಡಿವೆ.

Advertisement

Leave a reply

Your email address will not be published. Required fields are marked *

error: Content is protected !!