ಸದ್ಗುರು ಶ್ರೀ ಮಧುಸೂದನ ಸಾಯಿರವರ ಜನ್ಮದಿನದ ಅಂಗವಾಗಿ ಸೇವಾ ಕಾರ್ಯ
ಬೆಳಗಾವಿ : ಸತ್ಯಸಾಯಿ ಲೋಕಸೇವಾ ಗುರುಕುಲದ ಪೂಜ್ಯ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ 46 ನೇ ಜನ್ಮದಿನದ ಅಂಗವಾಗಿ ಬೆಳಗಾವಿ ಜಿಲ್ಲೆಯ ಹಲವೆಡೆ ಸೇವಾ ಕಾರ್ಯಗಳು ವಿಜೃಂಭಣೆಯಿಂದ ಜರುಗಿದವು.
ಅಂತರ್ಯಾಮಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ನಾಗರಾಜ ಗಸ್ತಿ ಅವರ ಮುಂದಾಳತ್ವದಲ್ಲಿ ಖಾನಾಪುರ ತಾಲೂಕಿನ ಆಶೋಕ ನಗರದಲ್ಲಿ ಗರ್ಭಿಣಿ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಔಷಧಿ ವಿತರಣೆ ಕಾರ್ಯಕ್ರಮ ನಡೆಯಿತು.
ನಂತರ ಖಾನಾಪುರ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಣೆ ಹಾಗೂ ಬೆಳಗಾವಿ ನಗರದ ವಿವಿಧ ಭಾಗಗಳಲ್ಲಿ ತಂಗಿರುವ ನಿರಾಶ್ರಿತರಿಗೆ ಅನ್ನ ಸಂತರ್ಪಣಾ ಸೇವೆ ಕೈಗೊಳ್ಳಲಾಯಿತು. ಈ ವೇಳೆ ಕಾಶಿನಾಥ ವಾಗ್ಮೊರೆ, ಗಣೇಶ್ ಭಂಡಾರೆ, ದಿವ್ಯಾ ಹೊಸೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


