Select Page

ಪಾಲಿಕೆಯಲ್ಲಿ ಎಂಇಎಸ್ ಪುಂಡಾಟ ; ಕರವೇ ಆಕ್ರೋಶ

ಪಾಲಿಕೆಯಲ್ಲಿ ಎಂಇಎಸ್ ಪುಂಡಾಟ ; ಕರವೇ ಆಕ್ರೋಶ

ಬೆಳಗಾವಿ : ಮಹಾನಗರ ಪಾಲಿಕೆಯಲ್ಲಿ ದಾಖಲೆಗಳನ್ನು ಮರಾಠಿ ಭಾಷೆಯಲ್ಲಿ ನೀಡುವಂತೆ ಎಂಇಎಸ್ ( ಮಹಾರಾಷ್ಟ್ರ ಏಕೀಕರಣ ಸಮಿತಿ ) ಬೆಂಬಲಿತ ಅಭ್ಯರ್ಥಿಗಳು ಮೊಂಡಾಟ ಮಾಡಿರುವ ಘಟನೆ ಪರಿಷತ್ ಸಭೆಯಲ್ಲಿ ನಡೆಯಿತು.

ಗುರುವಾರ ಬೆಳಗಾವಿ ಮಹಾನಗರ ಪಾಲಿಕೆಯ ಪರಿಷತ್ ಸಭೆಯಲ್ಲಿ ಎಂಇಎಸ್ ಸದಸ್ಯರು ಮತ್ತೊಮ್ಮೆ ತಮ್ಮ ಕನ್ನಡ ವಿರೋಧಿ ಧೋರಣೆ ತೋರ್ಪಡಿಸಿದರು. ಪರಿಷತ್ ಸಭೆಯ ನಡಾವಳಿ ಸೇರಿದಂತೆ ದಾಖಲೆಗಳನ್ನು ಮರಾಠಿ ಭಾಷೆಯಲ್ಲಿ ನೀಡುವಂತೆ ತಕರಾರು ತಗೆದರು. ಈ ವೇಳೆ ಆಡಳಿತ ಪಕ್ಷದ ಸದಸ್ಯರು ವಾಗ್ವಾದಕ್ಕೆ ಇಳಿದ ಘಟನೆಯೂ ನಡೆಯಿತು.

ಎಂಇಎಸ್ ಬೆಂಬಲಿತ ಸದಸ್ಯ ರವಿ ಸಾಳುಂಕೆ ಭಾಷಾ ಅಲ್ಪಸಂಖ್ಯಾತ ಕಾಯ್ದೆ ಅನ್ವಯ ಮರಾಠಿ ಭಾಷೆಯಲ್ಲಿ ದಾಖಲೆ ನೀಡುವಂತೆ ಖ್ಯಾತೆ ತಗೆದರು. ಈ ವೇಳೆ ವೈಶಾಲಿ ಭಾತಕಾಂಡೆ ಹಾಗೂ ಶಿವಾಜಿ ಮಂಡೋಳ್ಕರ್ ಕೈ ಜೋಡಿಸಿ ಸಭೆಯಿಂದ ಹೊರನಡೆದರು.

ಬೆಳಗಾವಿ ಮಹಾನಗರ ಮಾಲಿಕೆಯ ಕನ್ನಡ ಕಡ್ಡಾಯಗೊಳಿಸುವ ನಿರ್ಧಾರಕ್ಕೆ ಬರಲಾಗಿದ್ದು ಇದಕ್ಕೆ ಎಂಇಎಸ್ ಸದಸ್ಯರಿಂದ ತೀವ್ರ ವ್ಯಕ್ತವಾಗುತ್ತಿದೆ. ಯಾವುದೇ ಕಾರಣಕ್ಕೂ ಬೆಳಗಾವಿ ನಗರ ಸೇರಿದಂತೆ ಗಡಿ ಭಾಗದಲ್ಲಿ ಕನ್ನಡ ಕಡ್ಡಾಯಗೊಳಿಸುವುದಕ್ಕೆ ಎಂಇಎಸ್ ವಿರೋಧ ವ್ಯಕ್ತಪಡಿಸುವ ಮೂಲಕ ನಾಡವಿರೋಧಿ ನಡೆ ಮುಂದುವರಿಸಿದೆ.

**********

ಪಾಲಿಕೆ ಮುತ್ತಿಗೆಗೆ ಕರವೇ ಯತ್ನ

ಬೆಳಗಾವಿ ಮಹಾನಗರ ಪಾಲಿಕೆ ಪರಿಷತ್ ಸಭೆಯಲ್ಲಿ ಪುಂಡಾಟ ಮೆರೆದ ಎಂಇಎಸ್ ಸದಸ್ಯರನ್ನು ‌ಅಮಾನತು ಮಡುವಂತೆ ಆಗ್ರಹಿಸಿ ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ನೇತೃತ್ವದಲ್ಲಿ ಪಾಲಿಕೆ ಮುತ್ತಿಗೆಗೆ ಯತ್ನ ನಡೆಯಿತು. ಈ ವೇಳೆ ಮಧ್ಯಪ್ರದೇಶ ಮಾಡಿದ ಪೊಲೀಸರು ಹೋರಾಟಗಾರರನ್ನು ವಶಕ್ಕೆ ಪಡೆದುಕೊಂಡರು.

ಈ ವೇಳೆ ಪ್ರತಿಕ್ರಿಯೆ ನೀಡಿದ ದೀಪಕ್ ಗುಡಗನಟ್ಟಿ. ಮಹಾನಗರ ಪಾಲಿಕೆಯಲ್ಲಿ ಪುಂಡಾಟ ಮೆರೆಯುತ್ತಿರುವ ಎಂಇಎಸ್ ಸದಸ್ಯ ರವಿ ಸಾಳುಂಕೆ ಸೇರಿ‌ ಮೂವರನ್ನು ಅಮಾನತುಗೊಳಿಸಿ ಗಡಿಪಾರು ಮಾಡಬೇಕು. ಪಾಲಿಕೆಯ ಆಡಳಿತ ಸೇವೆಯಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಕೆ ಮಾಡಬೇಕೆಂದು ಆಗ್ರಹಿಸಿದರು.‌



Advertisement

Leave a reply

Your email address will not be published. Required fields are marked *

error: Content is protected !!