Select Page

Advertisement

ಬೆಳಗಾವಿಯಲ್ಲಿ ತಿರಂಗಾ ಯಾತ್ರೆಗೆ ಅಭೂತಪೂರ್ವ ಬೆಂಬಲ

ಬೆಳಗಾವಿಯಲ್ಲಿ ತಿರಂಗಾ ಯಾತ್ರೆಗೆ ಅಭೂತಪೂರ್ವ ಬೆಂಬಲ

ಬೆಳಗಾವಿ : ಪಹಲ್ಗಾಮ ದಾಳಿ ನಂತರ ಪಾಕಿಸ್ತಾನದ ವಿರುದ್ಧ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ತಕ್ತ ಪ್ರತ್ಯುತ್ತರ ನೀಡಿದ ಹಿನ್ನಲೆಯಲ್ಲಿ ಸೈನಿಕರಿಗೆ ನೈತಿಕ ಬೆಂಬಲ ನೀಡುವ ಉದ್ದೇಶದಿಂದ ಜರುಗಿದ ತಿರಂಗಾ ಯಾತ್ರೆಗೆ ಬೆಳಗಾವಿಯಲ್ಲಿ ಅಭೂತಪೂರ್ವ ಬೆಂಬಲ ಲಭ್ಯವಾಯಿತು.‌

ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ದೇಶಭಕ್ತರು ಭಾರತೀಯ ಸೈನಿಕರಿಗೆ ಬೆಂಬಲಿಸಿ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ದೇಶದ ಸಂಕಷ್ಟದ ಸಂದರ್ಭದಲ್ಲಿ ಪ್ರತಿಯೊಬ್ಬ ಭಾರತೀಯರು ಒಗ್ಗಟ್ಟು ಪ್ರದರ್ಶನ ಮಾಡಬೇಕು. ಜೊತೆಗೆ ನಮ್ಮ ಸೈನಿಕರು ತೋರುವ ಶೌರ್ಯಕ್ಕೆ ಸದಾಕಾಲವೂ ನೈತಿಕ ಬೆಂಬಲ ನೀಡುವ ಜವಾಬ್ದಾರಿ ಎಲ್ಲರದೂ ಎಂದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ತಿರಂಗಾ ಯಾತ್ರೆ ಮಾಡುವ ಉದ್ದೇಶವೇ ಭಾರತೀಯರಲ್ಲಿ ದೇಶಭಕ್ತಿ ಜಾಗೃತಿ ಮಾಡುವುದು. ಆಪರೇಷನ್ ಸಿಂಧೂರ ಮೂಲಕ ಈಗಾಗಲೇ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಎಚ್ಚರಿಕೆ ನೀಡಿದೆ. ಭಯೋತ್ಪಾದನೆ ಮುಂದುವರೆದರೆ ಯುದ್ಧ ನಿಶ್ಚಿತ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಂಸದೆ ಮಂಗಲಾ ಅಂಗಡಿ, ಮಾಜಿ ಶಾಸಕ ವಿಶ್ವನಾಥ ಪಾಟೀಲ್, ಸಂಜಯ್ ಪಾಟೀಲ್, ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಡಾ. ಸೋನಾಲಿ ಸರ್ನೋಬತ್, ಮುಖಂಡರಾದ ಮಹಾಂತೇಶ್ ವಕ್ಕುಂದ, ಮುರುಘೇಂದ್ರಗೌಡ ಪಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!