Select Page

Advertisement

ಭೀಕರ ರಸ್ತೆ ಅಪಘಾತ ; ಬಿಜೆಪಿ ಮುಖಂಡ ಸೇರಿ ಮೂವರು ಸಾವು

ಭೀಕರ ರಸ್ತೆ ಅಪಘಾತ ; ಬಿಜೆಪಿ ಮುಖಂಡ ಸೇರಿ ಮೂವರು ಸಾವು

ತುಮಕೂರು : ಪ್ರವಾಸಕ್ಕೆ ತೆರಳಿದ್ದ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಬಿಜೆಪಿ ಮುಖಂಡ ಸೇರಿ ಮೂವರು ಮೃತಪಟ್ಟ ಘಟನೆ ಆಂಧ್ರದ ಕರ್ನೂಲು ಬಳಿ ನಡೆದಿದೆ.

ತುಮಕೂರಿನ ಕೆಂಕೆರೆ ನಿವಾಸಿಗಳಾದ ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ನವೀನ್(48), ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಸಂತೋಷ್(35), ಲೋಕೇಶ್ (38) ಮೃತ ದುರ್ದೈವಿಗಳು.

ಆಂಧ್ರಪ್ರದೇಶದ ಕಡೆಗೆ ಪ್ರವಾಸಕ್ಕೆ ನವೀನ್, ಸಂತೋಷ್, ಹಾಗೂ ಲೋಕೇಶ್ ಸೇರಿದಂತೆ ಒಟ್ಟು 6 ಜನ ತೆರಳಿದ್ದರು.‌ ಕಾರಿನಲ್ಲಿ ಆಂಧ್ರದ ಕರ್ನೂಲು ಬಳಿ ತೆರಳುವಾಗ ಕಾರು ಅಪಘಾತ‌ ಸಂಭವಿಸಿದ್ದು ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!