Select Page

Advertisement

Video : ಹೆತ್ತ ಮಗುವನ್ನೇ ಕೆರೆಗೆ ಎಸೆದ ತಾಯಿ ; ಏನು ಕಾರಣ…?

Video : ಹೆತ್ತ ಮಗುವನ್ನೇ ಕೆರೆಗೆ ಎಸೆದ ತಾಯಿ ; ಏನು ಕಾರಣ…?

ಬೆಳಗಾವಿ : ಹೆತ್ತ ಮಗುವನ್ನು ಕೆರೆಗೆ ಎಸೆಯುವಾಗ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಅಮಾನವೀಯ ಘಟನೆ ನಗರದ ಕಣಬರಗಿ ಕೆರೆ ಪಕ್ಕದಲ್ಲಿ ನಡೆದಿದ್ದು, ಮಗುವನ್ನು ರಕ್ಷಿಸಲಾಗಿದೆ.

ಭಾನುವಾರ ಶಾಂತಾ ಕರವಿನಕುಪ್ಪಿ (35) ಮಹಿಳೆ ತನ್ನ ಎರಡು ತಿಂಗಳು ವಯಸ್ಸಿನ ಮಗುವನ್ನು ಕಣಬರಗಿ ಕೆರೆಗೆ ಎಸೆದಿದ್ದಾಳೆ. ತಕ್ಷಣ ಸ್ಥಳೀಯರು ಮಗುವನ್ನು ಗಮನಿಸಿದ್ದು ನೀರಿನಿಂದ ಹೊರತಗೆದು ಮಗುವಿನ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳಗಾವಿಯ ರಾಮತೀರ್ಥ ನಗರದ ನಿವಾಸಿಯಾಗಿರುವ ಮಹಿಳೆಗೆ ಎರಡು ಮಕ್ಕಳಿಗೆ. ಈಕೆಯ ಪತಿ ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿದ್ದಾನೆ.‌ ಮಾಳ ಮಾರುತಿ ಪೊಲೀಸರು ಮಹಿಳೆಯನ್ನು ವಿಚಾರಣೆ ಮಾಡಿದ ಸಂದರ್ಭದಲ್ಲಿ ಮಗುವಿಗೆ ಮೂರ್ಚೆ ರೋಗ ಇದ್ದು ಆಸ್ಪತ್ರೆಗೆ ತೋರಿಸಿದರು ಯಾವುದೇ ಪ್ರಯೋಜನ ಆಗದ ಹಿನ್ನಲೆಯಲ್ಲಿ ಕೆರೆಗೆ ಎಸೆದಿರುವುದಾಗಿ ಹೇಳಿಕೆ ನೀಡಿದ್ದಾಳೆ.

ಸಧ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಳಮಾರುತಿ ಪೊಲೀಸರು ಮಹಿಳೆಯನ್ನು ಹಾಗೂ ಆಕೆಯ ಪತಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ರಕ್ಷಿಸಿದ ಮಗುವನ್ನು ಸ್ಥಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

Leave a reply

Your email address will not be published. Required fields are marked *

error: Content is protected !!