Select Page

Advertisement

Love ಮ್ಯಾಟರ್ ಗೆ ಸಿಡಿದ ಗುಂಡು ; ಬದುಕುಳಿದ ಪ್ರಿಯತಮ..ಕಂಬಿ ಹಿಂದೆ ಮಾಜಿ ಪ್ರಿಯತಮೆ..!

Love ಮ್ಯಾಟರ್ ಗೆ ಸಿಡಿದ ಗುಂಡು ; ಬದುಕುಳಿದ ಪ್ರಿಯತಮ..ಕಂಬಿ ಹಿಂದೆ ಮಾಜಿ ಪ್ರಿಯತಮೆ..!

ಬೆಳಗಾವಿ : ಮುರಿದಿಬಿದ್ದಿದ್ದ ಪ್ರೀತಿಯನ್ನು ಮಾತುಕತೆ ಮೂಲಕ ಬಗೆಹರಿಸುವ ಸಂದರ್ಭದಲ್ಲಿ ಉಂಟಾದ ಜಗಳದಿಂದ ಮಾಜಿ ಗೆಳತಿ ಹಾಗೂ ಇಬ್ಬರು ಸ್ನೇಹಿತರು ಸೇರಿ ಯುವನ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣ ಬುಧವಾರ ನಡೆದಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬುಧವಾರ ಸಂಜೆ ಕೆಎಂಎಫ್ ಡೈರಿ ಬಳಿ ಪ್ರಣೀತ್ ಕುಮಾರ್ (31) ಮೇಲೆ ಗುಂಡು ಹಾರಿಸಿ ಆರೋಪಿಗಳು ಪರಾರಿಯಾದ ಘಟನೆ ನಡೆಸಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಕರಣ ಕುರಿತು ತನಿಖೆ ನಡೆಸಿದ್ದ ಮಾರ್ಕೆಟ್ ಠಾಣೆ ಪೊಲೀಸರು ಘಟನೆಗೆ ಮಾಜಿ ಪ್ರಿಯತಮೆ ಹಾಗೂ ಆಕೆಯ ಗೆಳೆಯರು ಕಾರಣ ಎಂಬ ಅಂಶ ಬೆಳಕಿಗೆ ಬಂದಿದೆ.

ಪ್ರಣೀತ್ ಕುಮಾರ ಎಂಬಾತ ಬುಧವಾರ ರಾತ್ರಿ ಸ್ನೇಹಿತೆಯ ಮನೆಗೆ ಊಟಕ್ಕೆ ತೆರಳಿದ್ದಾನೆ. ಈ ಸಂದರ್ಭದಲ್ಲಿ ತನ್ನ ಪ್ರೀತಿ ಮುರಿದುಬಿದ್ದ ವಿಚಾರವಾಗಿ ಗೆಳತಿಗೆ ಪ್ರಣೀತ್ ಹೇಳಿಕೊಂಡಿದ್ದಾನೆ. ಇದಕ್ಕೆ ಆತನ ಸ್ನೇಹಿತೆ ಪ್ರಣೀತ್ ಪ್ರೀತಿಸಿದ ಹುಡುಗಿಯನ್ನು ಮನೆಗೆ ಕರೆದಿದ್ದಾಳೆ‌. ಈ ಸಂದರ್ಭದಲ್ಲಿ ಮನೆಗೆ ಬಂದ ಯುವತಿ ಹಾಗೂ ಪ್ರಣೀತ್ ಮಧ್ಯೆ ಗಲಾಟೆ ಸಂಭವಿಸಿದೆ. ಇನ್ನಿಬ್ಬರು ಪ್ರಣೀತ್ ಪ್ರೀತಿಸಿದ್ದ ಹುಡುಗಿ ಜೊತೆ ಅಡೆರಿಕೊಂಡು ಗುಂಡು ಹಾರಿಸಿದಾಗ ಪ್ರಣೀತ್ ಗೆ ತಾಗಿ ಗಂಭೀರವಾಗಿ ಗಾಯವಾಗಿತ್ತು.

ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿತರನ್ನು ಪೊಲೀಸರು ಬಂಧಿಸಿದ್ದು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!