ಬೆನ್ನು ಮುಟ್ಟಿದ್ದಕ್ಕೆ 25 ಲಕ್ಷ ಕೊಡು ಎಂದ ದಿದ್ಯಾ…ಇದು ವಿನಾಯಕನ ಸ್ಯಾಡ್ ಸ್ಟೋರಿ..
ಬೆಳಗಾವಿ : ಹನಿಹನಿಟ್ರ್ಯಾಪ್ ಹಾಗೂ ಅಪಹರಣ ಪ್ರಕರಣದಲ್ಲಿ ಓರ್ವ ಯುವತಿ ಸೇರಿ ಬೆಳಗಾವಿ ಮೂಲದ ಒಟ್ಟು ನಾಲ್ವರನ್ನು ಬೆಳಗಾವಿ ನಗರ ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ನಡೆದಿದೆ.
ಬೆಳಗಾವಿ ನಗರದ ತಿಲಕವಾಡಿಯ ವಿನಾಯಕ ಕುರುಡೆಕರ್ ಎಂಬ ವ್ಯಕ್ತಿ ತಮಗೆ ಪರಚಿತಳಾದ ಶಹಾಪುರದ ದಿವ್ಯಾ ಸಪಕಾಳೆ ( 22 ) ಎಂಬಾತಳು ಮಲಗಿದ್ದ ಸಂದರ್ಭದಲ್ಲಿ ಬುಜ ಮುಟ್ಟಿ ನಮಸ್ಕಾರ ಮಾಡಿದ್ದ ವೀಡಿಯೋ ಒಂದನ್ನು ಇಟ್ಟುಕೊಂಡು ಹಣಕ್ಕೆ ಬೇಡಿಕೆ ಹಾಗೂ ಕಿರುಕುಳ ನಿಡೀದ್ದಾರೆ ಎಂದು ಪ್ರಕರಣ ದಾಖಲಾಗಿತ್ತು.
ಬೆಳಗಾವಿ ನಗರದ ಶಹಾಪೂರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಬೆನ್ನು ಬುದ್ದ ಪೊಲೀಸರು ಹನಿಟ್ರ್ಯಾಪ್ ತಂಡವನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ ಬುಜ ಮುಟ್ಟಿದ್ದ ವೀಡಿಯೋ ಇಟ್ಟುಕೊಂಡು ಸುಮಾರು 25 ಲಕ್ಷ ರೂ. ಹಣ ನೀಡುವಂತೆ ದಿವ್ಯಾ & ಗ್ಯಾಂಗ್ ವಿನಾಯಕನಿಗೆ ಬೆದರಿಕೆ ಹಾಕಿತ್ತು.
ಹಣಕ್ಕೆ ಬೇಡಿಕೆ ಇಟ್ಟ ಕಾರಣಕ್ಕೆ ಆರೋಪಿಗಳಿಗೆ ಈತ 15 ಲಕ್ಷ ಹಣ ಕೊಟ್ಟಿದ್ದ. ಇನ್ನುಳಿದ 10 ಲಕ್ಷ ಹಣ ಕೊಡುವಂತೆ ಆರೋಪಿತರು ಕಿರಿಕುಳ ನೀಡುತ್ತಿದ್ದರು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ದಿವ್ಯಾ ಸಪಕಾಳೆ, ಪ್ರಶಾಂತ ಕೊಲ್ಕಾರ್, ಕುಮಾರ ಗೊಕರಕ್ಕನವರ, ರಾಜು ಗಗಡಿ ಎಂಬಾತರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ 10 ಲಕ್ಷ ಹಣ ಹಾಗೂ ಮೂರು ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಆರೋಪಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


