Select Page

Advertisement

ಮೋದಿಯಂತೆ ಜಾರಕಿಹೊಳಿ ಒಂದು ಬ್ರ್ಯಾಂಡ್ ; ಮನೆತನದ ಕುರಿತು ಸಾಹುಕಾರ್ ಹೇಳಿದ್ದೇನು..?

ಮೋದಿಯಂತೆ ಜಾರಕಿಹೊಳಿ ಒಂದು ಬ್ರ್ಯಾಂಡ್ ; ಮನೆತನದ ಕುರಿತು ಸಾಹುಕಾರ್ ಹೇಳಿದ್ದೇನು..?

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ಹಿಂದೆ ಹೇಗೆ ಒಂದು ದೊಡ್ಡ ಸಮೂಹ ಅದೇ ರೀತಿಯಲ್ಲಿ ನಮ್ಮ ಮನೆತನದ ಒಂದು ಬ್ರ್ಯಾಂಡ್ ಇದೆ. ನಮ್ಮ‌ ಮನೆಯವರು ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರು ಜನ ಮತ ಹಾಕುತ್ತಾರೆ ಎಂದರು.

 

 

ಖಾಸಗಿ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಲೋಕೋಪಯೋಗಿ ಹಾಗೂ ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ. ನಾವು ಯಾರನ್ನೇ ಸೋಲಿಸುವ ಪ್ರಶ್ನೆ ಬರುವುದಿಲ್ಲ. ಬೆಳೆಸುವ ಹಾಗೂ ಸೋಲಿಸುವ ಶಕ್ತಿ ಇರುವುದು ಜನರಿಗೆ ಮಾತ್ರ. ನಾವು ಒಬ್ಬರನ್ನು ಸೋಲಿಸುತ್ತೇವೆ ಎಂಬುದು ಭ್ರಮೆ ಮಾತ್ರ. ಜನ ಎಲ್ಲವನ್ನೂ ಗಮನಿಸಿ ನಿರ್ಧಾರ ಕೈಗೊಂಡಿರುತ್ತಾರೆ ಎಂದರು.

 

 

ಸಾಮಾನ್ಯವಾಗಿ ಜಾರಕಿಹೊಳಿ ಸಹೋದದರು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಪ್ರಮುಖ ಹುದ್ದೆಯಲ್ಲಿದ್ದಾರೆ. ಎರಡೂ ಪಕ್ಷದಲ್ಲಿ ತಮ್ಮ ಕಾರ್ಯಕರ್ತರ ದೊಡ್ಡ ಪಡೆಯನ್ನು ಹೊಂದಿದ್ದಾರೆ. ಮನೆಯಲ್ಲಿ ಮೂವರು ಶಾಸಕರು ಒಬ್ಬರು ಸಂಸದರು ಹಾಗೂ ಒಬ್ಬರು ವಿಧಾನ ಪರಿಷತ್ ಸ್ಥಾನದಲ್ಲಿ ಇದ್ದಾರೆ.

 

 

ಅಷ್ಟೇ ಅಲ್ಲದೆ ಕಳೆದ 15 ಕ್ಕೂ ಅಧಿಕ ವರ್ಷಗಳಿಂದ ಸರ್ಕಾರ ಯಾವುದೇ ಇರಲಿ. ಆದರೆ ಜಾರಕಿಹೊಳಿ ಮನೆಯ ಒಬ್ಬರಿಗೆ ಸಚಿವಸ್ಥಾನ ಫಿಕ್ಸ್ ಎಂಬಂತಾಗಿದೆ. ಬಾಲಚಂದ್ರ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಹಾಗೂ ಸತೀಶ್ ಈ ಮೂವರಲ್ಲಿ ಒಬ್ಬರು ಸಚಿವರಾಗಿಯೇ ಇರ್ತಾರೆ.

 

 

2028 ರಲ್ಲಿ ನಾನು ಸಿಎಂ ಆಗುವ ಸಂದರ್ಭ ಬರಬಹುದು ಎಂಬ ಮಾತನ್ನು ಸಚಿವ ಸತೀಶ್ ಜಾರಕಿಹೊಳಿ ಆಗಾಗ್ಗೆ ಹೇಳ್ತಾರೆ. ಆದರೆ ಸಿಎಂ ಸಿದ್ದರಾಮಯ್ಯ ಬದಲಾವಣೆ ಕಾಲ ಬಂದಿದ್ದೇ ಆದರೆ ಸತೀಶ್ ಜಾರಕಿಹೊಳಿ ಹೆಸರು ಪ್ರಸ್ತಾಪ ಮಾಡುವ ಸಾಧ್ಯತೆ ಇದೆ ಎಂಬ ಮಾತು ರಾಜಕೀಯ ವಲಯದಲ್ಲಿ ಜೋರಾಗಿದೆ.

 

Advertisement

Leave a reply

Your email address will not be published. Required fields are marked *

error: Content is protected !!