ಬೆಳಗಾವಿ : ಮುಜಾವರ್ ಆರ್ಕೆಡ್ ನಲ್ಲಿ ಕೆಟ್ಟು ನಿಂತ ಲಿಫ್ಟ್ ; ಜನರ ಪರದಾಟ
ಬೆಳಗಾವಿ : ನೆಹರು ನಗರದ ಮುಜಾವರ ಆರ್ಕೆಡ್ ನಲ್ಲಿ ಲಿಫ್ಟ್ ಕೆಟ್ಟು ನಿಂತ ಪರಿಣಾಮ ಒಳಗಡೆ ಸಿಲುಕಿದ ಜನ ಪರದಾಡಿದ ಘಟನೆ ನಡೆದಿದೆ.
ತಾಂತ್ರಿಕ ತೊಂದರೆಯಿಂದ ಲಿಫ್ಟ್ ಕೆಟ್ಟುನಿಂತ ಪರಿಣಾಮ ಒಳಗೆಡೆ ಇದ್ದು ಸುಮಾರು ಏಳು ಜನ ಪರದಾಡುವಂತಾಗಿದೆ. ಆರ್ಕೆಡ್ ನ ಸಿಬ್ಬಂದಿ ಹಾಗೂ ತಾಂತ್ರಿಕ ಪರಿಣತರು ಲಿಫ್ಟ್ ಸರಿಪಡಿಸುತ್ತಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಲಿಫ್ಟ್ ಕೆಟ್ಟ ಪರಿಣಾಮ ಇಡೀ ಕಾರ್ಖಾನೆ ಸುಟ್ಟ ಘಟನೆ ನಗರದ ಜನರನ್ನು ಕಂಗೆಡಿಸಿತ್ತು. ಪ್ರತಿಷ್ಠಿತ ಕಟ್ಟಡದಲ್ಲಿ ಈ ರೀತಿಯ ಘಟನೆ ನಡೆಯುತ್ತಿದ್ದು ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.


