ತಗ್ಗಿದ ಕೃಷ್ಣಾ ನದಿ ಪ್ರವಾಹ ; ಕುಡಚಿ ಸೇತುವೆ ಸಂಚಾರ ಆರಂಭ
ಕುಡಚಿ : ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಬಿಟ್ಟು ಬಿಡದೇ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದ್ದರಿಂದ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸಿ ಕೊಡುವ ಕುಡಚಿ-ಉಗಾರ ಸೇತುವೆ ಕಳೆದ ಜುಲೈ 23ರ ರಾತ್ರಿ ತಡರಾತ್ರಿ ಜಲಾವೃತಗೊಂಡು ಹತ್ತೊಂಬತ್ತು ದಿನ ಕಾಲ ಈ ಸೇತುವೆಯನ್ನೇ ಅವಲಂಬಿತ ಜನರು ಆತಂಕದಲ್ಲಿ ಇದ್ದರು.
ಸದ್ಯ ಕರ್ನಾಟಕ ಮಹಾರಾಷ್ಟ್ರ ಕೊಂಡಿ ಎನಿಸಿಕೊಂಡಿರುವ ಕುಡಚಿ ಸೇತುವೆ ಬಂದ ಆಗಿದ್ದರಿಂದ ರೈಲು ಸಂಚಾರ ಅವಲಂಬಿಸಬೇಕಾದ ಜನತೆ ಸೇತುವೆ ಸಂಚಾರಕ್ಕೆ ಮುಕ್ತ ಆಗಿದ್ದರಿಂದ ಈ ಭಾಗದ ಜನರು ಮಹಾರಾಷ್ಟ್ರದ ಆಸ್ಪತ್ರೆಗೆ ಹೋಗಲು ಅಥವಾ ಬೇರೆ ಕೆಲಸಕ್ಕೆ ಹೋಗಲು ನಿರಾಳಗೊಂಡು ಜನರು ನಿಟ್ಟುಸಿರು ಬಿಡುವಂತಾಗಿದೆ.
ಸುಮಾರು ಹತ್ತೊಂಬತ್ತು ದಿನ ನೀರು ನಿಂತಿದ್ದರಿಂದ ಜಲಾವೃತಗೊಂಡ ಭಾಗಗಳಲ್ಲಿ ಕೆಟ್ಟ ವಾಸನೆ ಬರುತ್ತಿದ್ದು ಜನರು ರೋಗ ಹರಡಿ ಬಹುದೆಂದು ಆತಂಕದಲ್ಲಿದ್ದಾರೆ.
ಈಗಾಗಲೇ ಕುಡಚಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸೊಳ್ಳೆ ಕಾಟ ಹೆಚ್ಚಾಗಿದ್ದರು ಅಧಿಕಾರಿಗಳು ಇಲ್ಲಿಯವರೆಗೆ ಸೂಚನೆಗಳನ್ನು ನೀಡುತ್ತಿರುವ ಹೊರತಾಗಿ ಫಾಗಿಂಗ್ ಮಾಡುವುದಾಗಲಿ ಅಥವಾ ಯಾವುದೇ ಮುನ್ನೆಚ್ಚರಿಕೆ ಕೈಗೊಂಡಿರುವುದಿಲ್ಲ.
ರಾಜ್ಯಾದ್ಯಂತ ಮೊದಲೆ ಡೆಂಗ್ಯೂ ಹರಡುವ ಆತಂಕ ಇದ್ದು ಜಿಲ್ಲಾಡಳಿತ ಹಾಗೂ ತಾಲೂಕಾ ಆಡಳಿತ ಕೂಡಲೆ ಕ್ರಮ ವಹಿಸಿ ಮುನ್ನೆಚ್ಚರಿಕೆ ಕ್ರಮವಾಗಿ ಪೌಡರ ಸಿಂಪಡಿಸಿ ಯಾವುದೇ ರೋಗ ಹರಡದಂತೆ ಕ್ರಮ ವಹಿಸಬೇಕಾಗಿದೆ