ಬೈಲಹೊಂಗಲ : ಹಾದಿ ತಪ್ಪಿದ ಸರಕಾರಿ ಬಸ್ ; ಕೆಲವರಿಗೆ ಗಾಯ
ಬೈಲಹೊಂಗಲ : ಸಾರಿಗೆ ಬಸ್ ಸ್ಟೇರಿಂಗ್ ರಾಡ್ ಕಟ್ಟಾಗಿ, ಪಲ್ಟಿಯಾಗಿರುವ ಘಟನೆ ತಾಲೂಕಿನ ಯರಡಾಲ ಗ್ರಾಮದ ಕೆರೆಯ ಹತ್ತಿರ ಮಂಗಳವಾರ ನಡೆದಿದೆ.
ಬೈಲಹೊಂಗಲದಿಂದ ಎಂ.ಕೆ.ಹುಬ್ಬಳ್ಳಿ ಮಾರ್ಗವಾಗಿ ಇಟಗಿ ಕ್ರಾಸಗೆ ತೆರಳುವ ಬಸ್ ಏಕಾಏಕಿ ಸ್ಟೇರಿಂಗ್ ರಾಡ್ ಕಟ್ಟಾಗಿದೆ. ತಕ್ಷಣ ಎಚ್ಚೆತ್ತ ಚಾಲಕನು ಬಸನ್ನು ಹೊಲದ ಮಡ್ಡಿ ಕಡೆಗೆ ತಿರುವು ಮಾಡಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ ಎಂದು ಸ್ಥಳೀಯರು ತಿಳಿಸಿದರು. ಘಟನೆಯಲ್ಲಿ 3 ಕ್ಕಿಂತ ಹೆಚ್ಚು ಜನರಿಗೆ ಗಾಯವಾಗಿದೆ. ಗಾಯಾಳುಗಳನ್ನು ಬೈಲಹೊಂಗಲದ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ತಹಶೀಲ್ದಾರ ಎಚ್ ಎನ್ ಶಿರಹಟ್ಟಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಅದೃಷ್ಟಾವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


