Select Page

Advertisement

ಬೈಲಹೊಂಗಲ : ಪ್ರವಾದಿ ಪೈಗಂಬರ್ ಕುರಿತು ಅವಹೇಳನಕಾರಿ ಹೇಳಿಕೆ ಖಂಡಿಸಿ ಬೃಹತ್ ಪ್ರತಿಭಟನೆ

ಬೈಲಹೊಂಗಲ : ಪ್ರವಾದಿ ಪೈಗಂಬರ್ ಕುರಿತು ಅವಹೇಳನಕಾರಿ ಹೇಳಿಕೆ ಖಂಡಿಸಿ ಬೃಹತ್ ಪ್ರತಿಭಟನೆ

ಬೈಲಹೊಂಗಲ : ಪ್ರವಾದಿ ಮೊಹಮ್ಮದ ಪೈಗಂಬರ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಶ್ರೀ ರಾಮಗಿರಿ ಮಹಾರಾಜರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪಟ್ಟಣದ ಅಂಜುಮನ್ ಎ-ಇಸ್ಲಾಂ ಕಮಿಟಿ, 13 ಮಸೀದಿಯ ಹಿರಿಯರು ಹಾಗೂ ಅಹಲೆ ಸುನ್ನತುಲ್ ಜಮಾತ್ ಸಂಘದಿಂದ ಮಂಗಳವಾರ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಅರ್ಪಿಸಿದರು.

ಮುಸ್ಲಿಂ ಸಮಾಜದ ಮುಖಂಡರು ಮಾತನಾಡಿ, ಮಹಾರಾಷ್ಟ್ರದ ಕಾರ್ಯಕ್ರಮದಲ್ಲಿ ರಾಮಗಿರಿ ಮಹಾರಾಜರು ತನ್ನ ಭಾಷಣದಲ್ಲಿ ಪ್ರವಾದಿ ಮೊಹಮ್ಮದ ಪೈಗಂಬರ್ ಬಗ್ಗೆ ಹಾಗೂ ಇಸ್ಲಾಂ ಧರ್ಮದ ಬಗ್ಗೆ ಅಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಇದು ಸಮುದಾಯದ ಜನರ ಧಾರ್ಮಿಕ ಭಾವನೆಗಳಿಗೆ ಅಘಾತ ಉಂಟು ಮಾಡಿದೆ.

ರಾಮಗಿರಿ ಮಹಾರಾಜರು ಸಮಾಜದ ಸ್ವಾಸ್ಥ್ಯ ಹಾಳು ಮಾಡವಂತ ಹೇಳಿಕೆ ನೀಡಿ, ಧರ್ಮ-ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡಲು ಯತ್ನಿಸುತ್ತಿದ್ದಾರೆ. ಇವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಅಂಜುಮನ್ ಇಸ್ಲಾಂ ಕಮಿಟಿಯ ಅಧ್ಯಕ್ಷ ಡಾ.ಐಜಾಜ ಬಾಗೇವಾಡಿ, ಮುಸ್ಲಿಂ ಸಮಾಜದ ಮುಖಂಡರಾದ ಬಾಬುಸಾಬ ಸುತಗಟ್ಟಿ, ಡಾ.ಶಬ್ಬೀರಹ್ಮದ ಖಾಜಿ, ಮೌಲಾನಾ ಶೌಕತ್ ಬಾಧಿ, ಮುಪ್ತಿ ಅಬ್ಬಾಸ,

ಮೌಲಾನಾ ಮುದಸರ್, ಹಾಪೀಜ ಇಸಾಕ, ಮೌಲಾನಾ ಮುಜೀಬಉಲ್ಲಾ, ಮೌಲಾನಾ ಅಖೀಲ್, ಮೌಲಾನಾ ಸೊಹೇಲ್, ಸಾಜೀದ ಬಾಬಣ್ಣವರ, ಅಹಲೆ ಸುನ್ನತುಲ್ ಜಮಾತ್ ಸಂಘದ ಅಧ್ಯಕ್ಷ ಲತೀಫಪೀರಾ ತೊಲಗಿ,

ಬುಡ್ಡೆಸಾಬ ಶಿರಸಂಗಿ, ಅಕ್ಬರ ತಾಳಿಕೋಟಿ, ಇಸ್ಮಾಯಿಲ್ ಬಡೇಘರ, ಇಕ್ಬಾಲ ಜಮಾದಾರ, ಇಮ್ತಿಯಾಜ ಗೋವೆ ಸೇರಿದಂತೆ ನೂರಾರು ಮುಸ್ಲಿಂ ಬಾಂಧವರು ಇದ್ದರು.

Advertisement

Leave a reply

Your email address will not be published. Required fields are marked *

error: Content is protected !!