ಅಥಣಿ : ತೆಲಸಂಗ ಗ್ರಾಮ ಪಂಚಾಯತಿಯಲ್ಲಿ ಅಗ್ನಿ ಅವಘಡ ; ದಾಖಲೆ ಸುಟ್ಟು ಭಸ್ಮ
ಅಥಣಿ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿಕೊಂಡ ಬೆಂಕಿ ಅವಘಡದಿಂದ ಗ್ರಾಮ ಪಂಚಾಯಿತಿಯ ಕಂಪ್ಯೂಟರ್ ಹಾಗೂ ಕೆಲವು ದಾಖಲಾತಿಗಳು ಸುಟ್ಟು ಕರಕಲಾಗಿರುವ ಘಟನೆ ತಾಲೂಕಿನ ತೆಲಸಂಗ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಸುಕಿನ ವೇಳೆ ಜರುಗಿದೆ.
ತಾಲೂಕಿನ ತೆಲಸಂಗ ಗ್ರಾಮದ ನಾಡಕಚೇರಿಯ ಬದಿಯಲ್ಲಿಯೇ ಇರುವ ಗ್ರಾಮ ಪಂಚಾಯತ ಕಾರ್ಯಾಲಯದ ಗಣಕಯಂತ್ರ ವಿಭಾಗದಲ್ಲಿ ಗುರುವಾರ ನಸುಕಿನ ವೇಳೆ ವಿದ್ಯತ್ ಅವಘಡದಿಂದ ಬೆಂಕಿ ಹೊತ್ತಿದೆ ಎಂದು ಶೆoಕಿಸಲಾಗಿದ್ದು, ಹೇಳಲಾಗುತ್ತಿದ್ದು, ಬೆಂಕಿ ಹೊತ್ತಿಕೊಂಡ ಕೊಠಡಿಯಲ್ಲಿನ ಟೇಬಲ್, ಕುರ್ಚಿ ಮತ್ತು ವಿವಿಧ ಅಭಿವೃದ್ಧಿ ಯೋಜನೆಗಳ ಕಡತಗಳು, ಹಾಗೂ 2 ಗಣಕಯಂತ್ರಗಳು ಸುಟ್ಟುಹೋಗಿವೆ.
ಬೆಳಗ್ಗೆ ಕಟ್ಟಡದಲ್ಲಿ ಹೊಗೆ ಕಾಣಿಸಿಕೊಂಡ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಗ್ರಾಮ ಪಂಚಾಯತ ಸಿಬ್ಬಂದಿ, ಬೆಂಕಿ ನಂದಿಸುವ ಸಾಧನ ಬಳಸಿ ಮತ್ತು ನೀರು ಸಿಂಪಡಿಸಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಸ್ಥಳಕ್ಕೆ ಅಥಣಿ ತಾಲೂಕಾ ಪಂಚಾಯತ ಅಧಿಕಾರಿ ಶಿವಾನಂದ ಕಲ್ಲಾಪೂರ, ಸಹಾಯಕ ನಿರ್ದೇಶಕ ಮೈಬೂಬ ಕೊತ್ವಾಲ್, ವ್ಯವಸ್ಥಾಪಕ ಜಿ.ಎo.ಸ್ವಾಮಿ ಹಾಗೂ ಐಗಳಿ ಪೋಲಿಸ್ ಠಾಣಾ ಸಿಬ್ಬಂದಿ ಭೇಟಿ ನೀಡಿ ಪರೀಶೀಲನೆ ಪರಿಶೀಲನೆ ನಡೆಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಬೀರಪ್ಪ ಕಡಗಂಚಿ ತಿಳಿಸಿದ್ದಾರೆ.


