ಅಥಣಿ : ಭೀಕರ ರಸ್ತೆ ಅಪಘಾತದ ಪ್ರಕರಣ ; ಮೃತರ ಸಂಖ್ಯೆ ಏಳಕ್ಕೆ ಏರಿಕೆ
ಅಥಣಿ : ತಿರುಪತಿಯ ತಿಮ್ಮಪ್ಪನ ದರ್ಶನ ಮಾಡಿಕೊಂಡು ಸ್ವ ಗ್ರಾಮಕ್ಕೆ ಆಗಮಿಸುತ್ತಿದ್ದ ಅಥಣಿ ತಾಲೂಕಿನ ಬಡಚಿ ಗ್ರಾಮದ ಭಕ್ತರ ಕ್ರೂಜರ್ ವಾಹನಕ್ಕೆ ಲಾರಿ ಡಿಕ್ಕಿ ಸಂಭವಿಸಿ ಸ್ಥಳದಲ್ಲಿ ಐದು ಜನ ಮೃತಪಟ್ಟಿದ್ದರು, ಇವತ್ತು ಬಸವರಾಜ್ ಗೀರಿಮಲ್ಲ ಆಜೂರ ಚಿಕಿತ್ಸೆ ಫಲಕಾರಿಯಾಗದೆ ಸಾವು ಸಂಭವಿಸಿ ಆಜೂರ ಕುಟುಂಬದಲ್ಲಿ ಸಾವಿನ ಸಂಖ್ಯೆ ಆರಕ್ಕೆ ಏರಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಡಚಿ ಗ್ರಾಮದ ಆಜೂರ್ ಕುಟುಂಬಸ್ಥರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಂಡು ಸ್ವ ಗ್ರಾಮಕ್ಕೆ ಆಗಮಿಸು ವೇಳೆ ತೆಲಂಗಾಣದ ಸೂರ್ಯಪೇಟ ಜಿಲ್ಲೆಯ ಮಟ್ಟಮ್ ಪಲ್ಲಿ, ಕಡಪ-ಚಿತ್ತೂರು ರಸ್ತೆಯಲ್ಲಿ ಅಪಘಾತ ಸಂಭವಿಸಿ ಸ್ಥಳಕ್ಕೆ ಐದು ಜನ ಸಾವು ಸಂಭವಿಸಿ 11 ಜನರಿಗೆ ಗಾಯಗಳಾಗಿದ್ದರು.
ಇದರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿತ್ತು, ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ದುರಾದೃಷ್ಟ ಕಸ್ತೂರಿ ಶೇಕರ ಆಜೂರ (೩೫) ಹಾಗೂ ಶಿವಾನಂದ ಗೀರಿಮಲ್ಲ ಆಜೂರ (೩೨) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು. ಸದ್ಯ ಆಜೂರ ಕುಟುಂಬದಲ್ಲಿ ಸಾವಿನ ಸಂಖ್ಯೆ ಆರಕ್ಕೆ ಏರಿ ಗ್ರಾಮದಲ್ಲಿ ಸಾವಿನ ಸಂಖ್ಯೆ ಏಳಕ್ಕೆ ಏರಿದೆ.
ಸೆ.೧೫ ರಂದು ನಡೆದ ಅಪಘಾತದಲ್ಲಿ
ತಾಯಿ ಶೋಭಾ ಆಜೂರ(36), ಮಗಳು ಅಂಬಿಕಾ ಆಜೂರ(14). ಹನುಮಂತ ಆಜೂರ (42) ಹಾಗೂ ಪತ್ನಿ ಮಹಾನಂದಾ ಆಜೂರ(32), ಕ್ರ್ಯೂಸರ್ ವಾಹನ ಚಾಲಕ ಹನುಮಂತ ಜಾಧವ್ ಸೇರಿ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಸೆ. ೧೮ ರಂದು ಚಿಕಿತ್ಸೆ ಫಲಕಾರಿಯಾಗದೆ ಕಸ್ತೂರಿ ಶೇಖರ್ ಆಜೂರ (೩೫) ಮೃತಪಟ್ಟರೆ, ಇವತ್ತು (ಮಂಗಳವಾರ) ಬಸವರಾಜ್ ಗೀರಿಮಲ್ಲ ಆಜೂರ (೩೨) ಮೃತ ಪಟ್ಟಿದ್ದಾರೆ. ಒಂದೇ ಕುಟುಂಬದಲ್ಲಿ ಆರು ಜನರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.


