Select Page

Advertisement

ಅಥಣಿ : ಏ ಮೊಸಳೆ ಬಂದೈತ್ ಹಿಡ್ಕೊರಿ…ಸುಟ್ಟಟ್ಟಿ ಮಂದಿ ಬಾಳ ಹುಂಬ

ಅಥಣಿ : ಏ ಮೊಸಳೆ ಬಂದೈತ್ ಹಿಡ್ಕೊರಿ…ಸುಟ್ಟಟ್ಟಿ ಮಂದಿ ಬಾಳ ಹುಂಬ


ಅಥಣಿ : ಊರ ದಾರಿಗೆ ಬಂದ ಭಯಾನಕ ಮೊಸಳೆಯನ್ನ ಗ್ರಾಮಸ್ಥರು ಸೇರಿಕೊಂಡು ಸೆರೆಹಿಡಿದ ಘಟನೆ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದ ಆಲಗೂರ ತೋಟದಲ್ಲಿ ನಡೆದಿದೆ.

ಬೃಹದಾಕಾರದ ಮೊಸಳೆಯನ್ನು ಕಂಡ ಗ್ರಾಮಸ್ಥರು ತಾವೇ ಸೇರಿಕೊಂಡು ಕಷ್ಟಪಟ್ಟು ಸೆರೆಹಿಡಿದಿದ್ದಾರೆ. ನಂತರ ಹಗ್ಗದಿಂದ ಕಟ್ಟಿಹಾಕಿ ಹೊರತಂದಿದ್ದಾರೆ.

ಸೆರೆಹಿಡಿಯುವ ಸಂದರ್ಭದಲ್ಲಿ ಮೊಸಳೆ ಗರ್ಜನೆ ಎಂತವರ ಎದೆ ಬಡಿತ ಜೋರು ಮಾಡುತ್ತಿತ್ತು. ಆದರೆ ನಾಲ್ಕೈದು ಯುವಕರು ಹುಂಬತನದಿಂದ ಈ ಕೆಲಸ ಮಾಡಿದ್ದಾರೆ.

ಸೆರೆಹಿಡಿದ ಮೊಸಳೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಬಂದು ವಶಪಡಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಯುವಕರ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!