Select Page

Advertisement

ಅಥಣಿ – ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾದ ರೈತ

ಅಥಣಿ – ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾದ ರೈತ

ಅಥಣಿ : ತಾಲೂಕಿನ ಸಂಬರಗಿ ಗ್ರಾಮದಲ್ಲಿ ಸಾಲದ ಕೂಪಕ್ಕೆ ರೈತನೊಬ್ಬ ಆತ್ಮ ಹತ್ಯೆಗೆ ಶರಣಾಗಿದ್ದು ರೈತನ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

ಅಪ್ಪಾಸಾಬ ಗಜಾನನ ಕೋಳಿ (40) ಮೃತ ದುರ್ದೈವಿ. ಕೃಷಿ ಸಂಬಂಧಿಸಿದಂತೆ 6 ಲಕ್ಷ ಸಾಲ ಮಾಡಿ ತೀರಿಸಲು ಆಗದೆ ಮನನೊಂದು ರವಿವಾರ ತೋಟದ ಮನೆಯಲ್ಲಿದ್ದ ರಾಸಾಯನಿಕ ಸೇವಿಸಿ ಆತ್ಮ ಹತ್ಯೆಗೆ ಯತ್ನಿಸಿದ್ದ.

ಮಾಹಿತಿ ತಿಳಿದ ಕುಟುಂಬಸ್ಥರು ಆತನನ್ನ ಚಿಕಿತ್ಸೆಗಾಗಿ ಅಥಣಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಅಥಣಿಯಲ್ಲಿ ಗಂಭೀರ ಸ್ಥಿತಿ ಗಮನಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆಂದು ಮಿರಜ್ ಆಸ್ಪತ್ರೆಗೆ ಚಿಕಿತ್ಸೆ ಸೂಚನೆ ನೀಡಿದ್ದಾರೆ.

ವೈದ್ಯರ ಸಲಹೆಯಂತೆ ಮಿರಜ್ ಸಿವಿಲ್ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ರೈತ ಮಂಗಳವಾರ ಸಾವನ್ನಪ್ಪಿದ್ದಾನೆ‌.

Advertisement

Leave a reply

Your email address will not be published. Required fields are marked *

error: Content is protected !!