Select Page

Advertisement

ಅತ್ಯಾಚಾರಿ ಜ್ಯೋತಿಷಿ ಕರಾಳ ಮುಖ‌ ಬಯಲು ; 250 ಕ್ಕೂ ಹೆಚ್ಚು ಅಶ್ಲೀಲ ವೀಡಿಯೋ ಬಯಲು..!

ಅತ್ಯಾಚಾರಿ ಜ್ಯೋತಿಷಿ ಕರಾಳ ಮುಖ‌ ಬಯಲು ; 250 ಕ್ಕೂ ಹೆಚ್ಚು ಅಶ್ಲೀಲ ವೀಡಿಯೋ ಬಯಲು..!




ಮಹಾರಾಷ್ಟ್ರ : ಮಹಿಳೆಯ ಮೇಲೆ ಅ*ತ್ಯಾಚಾ*ರ ಎಸಗಿದ ಆರೋಪದಡಿ ಜ್ಯೋತಿಷಿ ಬಾಬಾ ಅಶೋಕ್ ಖರಾತ್ ಬಂಧನವಾದ ಬೆನ್ನಲ್ಲೇ, ‘ಗುಲಾಬಿ ಗ್ಯಾಂಗ್’ ಅಧ್ಯಕ್ಷೆ ಸಂಗೀತಾ ತಿವಾರಿ ಆಕ್ರೋಶ ಹೊರಹಾಕಿದ್ದಾರೆ.

ಖರಾತ್ ಬಳಿ ಸುಮಾರು 200 ರಿಂದ 250 ಅಶ್ಲೀಲ ವಿಡಿಯೋಗಳಿದ್ದು, ಇದರಲ್ಲಿ ದೊಡ್ಡ ದೊಡ್ಡ ರಾಜಕೀಯ ನಾಯಕರು ಭಾಗಿಯಾಗಿರುವ ಸುಳಿವು ನೀಡಿದ್ದಾರೆ. ಇದೇ ವೇಳೆ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರೂಪಾಲಿ ಚಾಕಣಕರ್ ವಿರುದ್ಧವೂ ತಿವಾರಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕ್ಯಾಪ್ಟನ್, ಸಂಖ್ಯಾಶಾಸ್ತ್ರಜ್ಞ ಮತ್ತು ಜ್ಯೋತಿಷಿ ಎಂಬ ಮುಖವಾಡ ಧರಿಸಿದ್ದ ಅಶೋಕ್ ಖರಾತ್‌ನನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ. ಆತನ ಬಂಧನದ ನಂತರ ಒಂದೊಂದೇ ಕರಾಳ ಸತ್ಯಗಳು ಹೊರಬರುತ್ತಿವೆ. ಯಾರೂ ಕಲ್ಪಿಸಿಕೊಳ್ಳಲು ಸಾಧ್ಯವಾಗದಂತಹ ಅಸಹ್ಯಕರ ಕೆಲಸಗಳನ್ನು ಈತ ಮಾಡುತ್ತಿದ್ದ ಎಂಬುದು ಬಯಲಾಗಿದೆ.

ಈ ಹಗರಣದ ಬಗ್ಗೆ ಸ್ಥಳೀಯ ನ್ಯೂಸ್‌ ಚಾನೆಲ್ ಜೊತೆ ಮಾತನಾಡಿದ ಸಂಗೀತಾ ತಿವಾರಿ ಹಲವು ಸ್ಫೋಟಕ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ: “ಅಶೋಕ್ ಖರಾತ್ ಮಾಡಿದ ಕೃತ್ಯಗಳು ಅತ್ಯಂತ ಭಯಾನಕವಾಗಿವೆ.

ಈ ಪ್ರಕರಣದ ತನಿಖೆ ಅಂತ್ಯದವರೆಗೂ ತಲುಪುತ್ತದೆಯೇ ಎಂಬ ಸಂಶಯ ನನಗಿದೆ. ಏಕೆಂದರೆ ಇದರಲ್ಲಿ ಅನೇಕ ಪ್ರಭಾವಿ ನಾಯಕರು ಮತ್ತು ಖ್ಯಾತ ಉದ್ಯಮಿಗಳ ಹೆಸರುಗಳಿವೆ. ನನಗೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಖರಾತ್ ಬಳಿ ಕೇವಲ 58 ವಿಡಿಯೋ ಕ್ಲಿಪ್‌ಗಳಿಲ್ಲ, ಬದಲಿಗೆ ಆ ಸಂಖ್ಯೆ 250ಕ್ಕೂ ಹೆಚ್ಚಿದೆ.

ಇವುಗಳಲ್ಲಿ ಅಶ್ಲೀಲ ಚಿತ್ರಗಳು (Blue Films) ಮತ್ತು ಶಬ್ದಗಳಲ್ಲಿ ವಿವರಿಸಲು ಅಸಾಧ್ಯವಾದ ಅಸಹ್ಯಕರ ಸಂಗತಿಗಳಿವೆ. ಇದರಲ್ಲಿ ‘ಯೋನಿ ಪೂಜೆ’ ಮಾಡುವ ವಿಡಿಯೋಗಳೂ ಸೇರಿವೆ,” ಎಂದು ತಿವಾರಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಎನ್‌ಸಿಪಿ ನಾಯಕಿ ರೂಪಾಲಿ ಚಾಕಣಕರ್ ಅವರು ಖರಾತ್ ಜೊತೆಗಿರುವ ಫೋಟೋ ಮತ್ತು ವಿಡಿಯೋಗಳು ವೈರಲ್ ಆದ ನಂತರ ಟೀಕೆಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಅವರು ಮಹಿಳಾ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ಭೇಟಿ ಮಾಡಿದ್ದರು.




Advertisement

Leave a reply

Your email address will not be published. Required fields are marked *

error: Content is protected !!