ಅನನ್ಯ ಭಟ್ ನನ್ನ ಮಗಳಲ್ಲ ; ಕಳಚಿತು ಧರ್ಮಸ್ಥಳ ವಿರೋಧಿಗಳ ಮುಖವಾಡ
ಬೆಂಗಳೂರು : ಇಷ್ಟು ದಿನ ಅನನ್ಯ ಭಟ್ ನನ್ನ ಮಗಳು. ಧರ್ಮಸ್ಥಳದಲ್ಲಿ ಅವಳನ್ನು ಕೊಲೆ ಮಾಡಲಾಗಿದೆ ಎಂದು ಆರೋಪ ಮಾಡಿದ್ದ ಸುಜಾತಾ ಭಟ್ ಇಂದು ಉಲ್ಟಾ ಹೊಡೆದಿದ್ದಾಳೆ.( Sujatha Bhat )
ಅನನ್ಯ ಭಟ್ ನನ್ನ ಮಗಳಲ್ಲ. ಆಸ್ತಿ ವಿಚಾರಕ್ಕೆ ನಾನು ಈ ಕಥೆ ಹೇಳಬೇಕಾಯಿತು. ಗಿರಿಶ್ ಮಟ್ಟಣ್ಣನವರ್ ಈ ರೀತಿ ಹೇಳುವಂತೆ ಹೇಳಿದ್ದು, ಆ ಕಾರಣಕ್ಕೆ ಧರ್ಮಸ್ಥಳ ಭಕ್ತರು ನನ್ನನ್ನು ಕ್ಷಮಿಸಬೇಕು ಎಂದು ಹೇಳಿದ್ದಾರೆ. (Ananya Bhat )
ಅನಾಮಿಕ ತಲೆಬುರುಡೆ ಪ್ರಕರಣದ ನಂತರ ಬಂದಿದ್ದ ಸುಜಾತಾ ಭಟ್ ತನ್ನ ಮಗಳು ಕಾಣೆಯಾಗಿದ್ದು ಅವಳನ್ನು ಹುಡುಕುವಂತೆ ಎಸ್ಐಟಿಗೆ ಮನವಿ ನೀಡಿದ್ದಳು.
ಸಧ್ಯ ನನಗೆ ಅನನ್ಯ ಭಟ್ ಎಂಬ ಮಹಿಳೆ ಇರಲಿಲ್ಲ ಎಂಬುದನ್ನು ಸ್ವತ ಸುಜಾತಾ ಭಟ್ ಹೇಳಿಕೆ ನೀಡಿದ್ದು ಇದರಿಂದ ಧರ್ಮಸ್ಥಳ ವಿರುದ್ಧ ತಲೆಬುರುಡೆ ಇಲ್ಲದ ಆರೋಪ ಮಾಡುತ್ತಿದ್ದ ಕುತಂತ್ರಿಗಳ ಮುಳವಾಡ ಬಯಲಾಗಿದೆ.


