ಬೆಳಗಾವಿಯಲ್ಲಿ ವಿಮಾನ ತುರ್ತು ಭೂಸ್ಪರ್ಶ ; ಇಬ್ಬರಿಗೆ ಗಾಯ
ಬೆಳಗಾವಿ : ಸೇನಾ ತರಬೇತಿ ನೀಡುತ್ತಿದ್ದ ವಿಮಾನ ತಾಂತ್ರಿಕ ಕಾರಣದಿಂದ ಕೃಷಿ ತೋಟದಲ್ಲಿ ತುರ್ತು ಭೂಸ್ಪರ್ಶವಾದ ಹಿನ್ನೆಲೆ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ನಡೆದಿದೆ.
ಮಂಗಳವಾರ ಬೆಳಗಾವಿ ತಾಲೂಕಿನ ಹೊನ್ನಿಹಾಳ ಹೊರವಲಯದ ಮೋದಗಾ, ಬಾಗೇವಾಡಿ ರಸ್ತೆ ಬಳಿಯ ಕೃಷಿ ಜಮೀನಿನಲ್ಲಿ ತರಬೇತಿ ವಿಮಾನವೊಂದು ತಾಂತ್ರಿಕ ಸಮಸ್ಯೆ ದಿಂದಾಗಿ ತುರ್ತು ಭೂಸ್ಪರ್ಶವಾಗಿದೆ. ವಿಮಾನದಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ
ನಗರದ ಸಾಂಬ್ರಾ ವಿಮಾನ ನಿಲ್ದಾಣದಿಂದ ತರಬೇತುದಾರ ವಿಮಾನವು ಟೇಕಾಫ್ ಆಗಿದ್ದು, ಕೆಲವು ನಿಮಿಷಗಳ ನಂತರ ತಾಂತ್ರಿಕ ದೋಷ ಕಂಡು ಬಂದಿದೆ. ಈ ಸಂದರ್ಭದಲ್ಲಿ ಪೈಲಟ್ ಸಮಯಪ್ರಜ್ಞೆಯಿಂದ ಕೃಷಿ ಜಮೀನಿನಲ್ಲಿ ಭೂಸ್ಪರ್ಶ ಮಾಡಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯಲ್ಲಿ ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಸಾಂಬ್ರಾ ಮಿಮಾನ ನಿಲ್ದಾಣದ ಅಧಿಕಾರಿಗಳು. ರೆಡ್‌ಬರ್ಡ್ ಸಂಸ್ಥೆಗೆ ಸೇರಿದ ವಿಟಿ-ಆರ್ ಬಿಎಫ್ ತರಬೇತಿ ವಿಮಾನ ಸಾಂಬ್ರಾ ವಿಮಾನ ನಿಲ್ದಾಣದಿಂದಳ ಹೊರಟಿತ್ತು. ಈ ಸಂದರ್ಭದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು ತುರ್ತು ಭೂಸ್ಪರ್ಶವಾಗಿದೆ. ಸ್ಥಳಕ್ಕೆ ಪೊಲೀಸರು ಮತ್ತು ಭಾರತೀಯ ವಾಯುಪಡೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದದ್ದಾರೆ ಎಂದರು.


