Select Page

Advertisement

ಕಿತ್ತೂರು : ಪರಿಷತ್ ನಲ್ಲಿ ಪ್ರತಿಧ್ವನಿಸಿದ ನಕಲಿ ವೈದ್ಯನ ಭ್ರೂಣಹತ್ಯೆ ಪ್ರಕರಣ

ಕಿತ್ತೂರು : ಪರಿಷತ್ ನಲ್ಲಿ ಪ್ರತಿಧ್ವನಿಸಿದ ನಕಲಿ ವೈದ್ಯನ ಭ್ರೂಣಹತ್ಯೆ ಪ್ರಕರಣ

ಬೆಂಗಳೂರು : ಕಿತ್ತೂರಿನ ನಕಲಿ ವೈದ್ಯನ ಭ್ರೂಣಹತ್ಯೆ ಹಾಗೂ ಶಿಶು ಮಾರಾಟ ಪ್ರಕರಣ ಇಂದು ವಿಧಾನ ಪರಿಷತ್ ನಲ್ಲಿ ಪ್ರತಿಧ್ವನಿಸಿತು. ವಿರೋಧ ಪಕ್ಷದ ನಾಯಕರು ಈ ಪ್ರಕರಣ ಪ್ರಸ್ತಾಪಿಸಿ ಆಡಳಿತ ಪಕ್ಷದ ವಿರುದ್ಧ ಹರಿಹಾಯ್ದರು.

ಹೌದು ಕಳೆದ ಕೆಲ ದಿನಗಳ ಹಿಂದೆಯಷ್ಟೇ ನಕಲಿ ವೈದ್ಯನ ಕರ್ಮಕಾಂಡ ಬಯಲಾಗಿತ್ತು. ಕಿತ್ತೂರು ಪಟ್ಟಣದಲ್ಲಿ ಆಸ್ಪತ್ರೆ ನಡೆಸುತ್ತಿದ್ದ ನಕಲಿ ವೈದ್ಯ ಶಿಶು ಮಾರಾಟ ಮತ್ತು ಭ್ರೂಣಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದು ಕಂಡುಬಂದಿತ್ತು.‌ ಇದಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ನಲ್ಲಿ ಬಿಜೆಪಿ ನಾಯಕ ಸಿ.ಟಿ ರವಿ ಈ ಕುರಿತು ಆರೋಗ್ಯ ಸಚಿವರನ್ನು ಪ್ರಶ್ನಿಸಿದರು.‌

ಸರ್ಕಾರ ಕೆಲ ಪ್ರಕರಣದ ಕುರಿತು ಮಾಹಿತಿ ನೀಡುತ್ತಿಲ್ಲ. ಗಂಭೀರ ಪ್ರಕರಣದಲ್ಲಿ ಆರೋಪಿಗಳು ಜಾಮೀನು ಪಡೆದು ಹೊರಗೆ ಬರುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಸಿ.ಟಿ ರವಿ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ಗುಂಡೂರಾವ್. ನಾವು ಯಾವುದೇ ಪ್ರಕರಣವನ್ನು ಮುಚ್ಚಲ್ಲ.

ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸುವ ಜವಾಬ್ದಾರಿ ನಮ್ಮದು. ನಮ್ಮ ಅಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಕೆಲ ಪ್ರಕರಣಗಳನ್ನು ಹೊರಗೆಡವಿದ್ದು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗುತ್ತದೆ ಎಂದು ಭರವಸೆ ನೀಡಿದರು.

Advertisement

Leave a reply

Your email address will not be published. Required fields are marked *

error: Content is protected !!