ವಿಜಯೋತ್ಸವಕ್ಕೆ ಸಿದ್ಧತೆ ನಡೆಸಿದ ಕೇಸರಿ ಪಡೆ
ಬೆಳಗಾವಿ : ಮಂಗಳವಾರ ನಡೆಯಲಿರುವ ಲೋಕಸಭಾ ಚುನಾವಣಾ ಮತ ಎಣಿಕೆ ಕಾರ್ಯದ ಹಿನ್ನಲೆಯಲ್ಲಿ ವಿಜಯೋತ್ಸವಕ್ಕೆ ಬಿಜೆಪಿ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ.
ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್ ನೇತೃತ್ವದಲ್ಲಿ ಸಿದ್ಧತೆ ನಡೆದಿದೆ. ಜನರಿಗೆ ಕುಳಿತುಕೊಳ್ಳಲು ಪೆಂಡಾಲ್ ವ್ಯವಸ್ಥೆ ಮಾಡಲಾಗಿದ್ದು ಬೃಹತ್ ಎಲ್ಇಡಿ ಪರದೆ ಅಳವಡಿಸಲಾಗಿದೆ.
ಬಂದ ಕಾರ್ಯಕರ್ತರಿಗೆ ಹಂಚಲು ಸಿಹಿ ತಯಾರಿಸಲಾಗಿದ್ದು, ಶಾಸಕ ಅಭಯ್ ಮುತುವರ್ಜಿ ವಹಿಸಿದ್ದಾರೆ. ಇನ್ನೂ ವಿಜಯೋತ್ಸವಕ್ಕೆ ಹಲವಾರು ವಾದ್ಯಗಳನ್ನು ಆಯೋಜನೆ ಮಾಡಲಾಗಿದೆ.
ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿ ಆಗಬೇಕೆಂಬ ಲಕ್ಷಾಂತರ ಜನರ ಕನಸಾಗಿದ್ದು ಕಾರ್ಯಕರ್ತರಲ್ಲಿ ಉತ್ಸಾಹ ಮನೆಮಾಡಿದೆ. ಈಗಾಗಲೇ ಮತ ಎಣಿಕೆ ಪೂರ್ವದ ಸಮೀಕ್ಷೆಯಲ್ಲಿ ಬಿಜೆಪಿ ಗೆಲುವ ವಿಶ್ವಾಸವನ್ನೂ ಮೂಡಿಸಿದೆ.


