ಚಿಕ್ಕೋಡಿ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಗ್ಯಾರೇಜ್ ನಲ್ಲಿ ಭಾರಿ ಪ್ರಮಾಣದ ಬೆಂಕಿ ಅವಘಡ ಸಂಭವಿಸಿ ಎರಡು ಕಾರುಗಳ ಜೊತೆಗೆ ಅಪಾರ ಪ್ರಮಾಣದ ಟೈಯರ್ ಗಳು ಸುಟ್ಟು ಕರಕಲಾಗಿರುವ ಘಟನೆ ಸಂಭವಿಸಿದೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಆವರಿಸಿ, ಅಂಗಡಿಯಲ್ಲಿದ್ದ ಟೈಯರ್ ಗಳು ಹಾಗೂ ಎರಡು ಕಾರುಗಳು ಸಂಪೂರ್ಣವಾಗಿ ಸುಟ್ಟು ಬಸ್ಮವಾಗಿವೆ.

ಪಕ್ಕದಲ್ಲಿರುವ ಅಂಗಡಿಗಳು ಕೂಡ ಬೆಂಕಿ ಆವರಿಸುವ ಆತಂಕದಲ್ಲಿದ್ದ ಸ್ಥಳೀಯರಿಗೆ ಅಗ್ನಿಶಾಮಕ ದಳದ ತುರ್ತು ಪ್ರವೇಶದಿಂದ ಅಕ್ಕ ಪಕ್ಕದ ಅಂಗಡಿಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಜೊತೆಗೆ ಅದೃಷ್ಟಾವಶಾ ಯಾವುದೇ ಪ್ರಾಣ ಹಾನಿ ಕೂಡ ಸಂಭವಿಸಿಲ್ಲ.

ಖಂಡೋಬಾ ಮಾಳಿ ಅವರಿಗೆ ಸೇರಿದ ಈ ಗ್ಯಾರೇಜ್, ಬೆಳಗಾವಿ ವಿಜಯಪುರ ರಾಜ್ಯ ಹೆದ್ದಾರಿ ಪಕ್ಕದಲ್ಲಿದ್ದು , ಹಲವು ವರ್ಷಗಳಿಂದ ರಿಪೇರಿ ಕಾರ್ಯವನ್ನು ನಡೆಸುತ್ತಿದ್ದರು ಬೆಳಿಗ್ಗೆ ಏಕಾಯಕಿ ಈ ಘಟನೆ ಸಂಭವಿಸಿದ್ದು ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ, ಈ ಬೆಂಕಿಯಿಂದ ಕೆಲವು ಕಾಲ ಗ್ರಾಮದಲ್ಲಿ ಆತಂಕಕ್ಕೆ ಕಾರಣವಾಗಿತ್ತು‌.

ಸ್ಥಳಕ್ಕೆ ಕಾಗವಾಡ ಚಿಕ್ಕೋಡಿ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ ಅಗ್ನಿಯನ್ನು ನಿಂದನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ, ಸ್ಥಳಕ್ಕೆ ಕಾಗವಾಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.