ವಿನಯ್ ಕುಲಕರ್ಣಿ ಗೆ ಮತ್ತೊಮ್ಮೆ ನಿರಾಸೆ ; ಮತದಾನಕ್ಕೆ ಅವಕಾಶ ಮನವಿ ತಿರಸ್ಕೃತ
ಬೆಂಗಳೂರು : ಜಿಲ್ಲಾ ಪಂಚಾಯತಿ ಅಧ್ಯಕ್ಷರ ಕೊಲೆ ಪ್ರಕರಣದ
ಹಿನ್ನಲೆಯಲ್ಲಿ ಧಾರವಾಡ ಪ್ರವೇಶ ನಿರ್ಬಂಧ ಹೊಂದಿರುವ ಶಾಸಕ ವಿನಯ್ ಕುಲಕರ್ಣಿ ನಾಳೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ನೀಡುವಂತೆ ಸಲ್ಲಿಸಿದ್ದ ಮನವಿ ತಿರಸ್ಕೃತವಾಗಿದೆ.
ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು, ಮತದಾನ ಮಾಡುವ ಹಿನ್ನೆಲೆಯಲ್ಲಿ,ಧಾರವಾಡ ಪ್ರವೇಶಕ್ಕೆ ಅನುಮತಿ ಕೋರಿ, ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಸೋಮವಾರ ಅರ್ಜಿ ತಿರಸ್ಕಾರಗೊಂಡಿದೆ.
ಆದರೆ ವಿಚಾರಣೆಯ ಹಂತದಲ್ಲಿರುವ ಹಲವಾರು ಪ್ರಕರಣಗಳಲ್ಲಿ,ಮತದಾನದ ಹಕ್ಕು ನೀಡಿದ ಉದಾಹರಣೆಗಳಿದ್ದು, ಕಾನೂನು ಮತ್ತು ನ್ಯಾಯಾಲಯದ ಮೇಲೆ ತುಂಬಾ ಗೌರವ ಮತ್ತು ವಿಶ್ವಾಸವಿದೆ.
ಆದ್ದರಿಂದ ಮಂಗಳವಾರ ಮತ್ತೆ, ಉಚ್ಛನ್ಯಾಯಾಲಕ್ಕೆ ಮರುಪರಿಶೀಲನೆ ಮಾಡಲು ಕೋರುತ್ತೇವೆ. ಮೂಲಭೂತ ಹಕ್ಕನ್ನು ಮಾನ್ಯ ನ್ಯಾಯಾಲಯ ನನಗೆ ನೀಡುವ ವಿಶ್ವಾಸವಿದೆ ಎಂದು ವಿನಯ ಕುಲಕರ್ಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


